ಕಾಶ್ಮೀರ: ಆಗಸ್ಟ್ ‌ವರೆಗೆ 139 ಉಗ್ರರ ಹತ್ಯೆ

ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಪ್ರಕರಣಗಳೂ ಹೆಚ್ಚಳ

Team Udayavani, Sep 1, 2019, 4:40 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 8 ತಿಂಗಳಿನಲ್ಲಿ 139 ಉಗ್ರರನ್ನು ಹತ್ಯೆಗೈದಿರುವುದಾಗಿ ಸೇನೆ ಹೇಳಿಕೊಂಡಿದೆ. ಸೇನೆಯಿಂದ ಹತ್ಯೆಗೊಳಗಾದವರಲ್ಲಿ ನಿಯಂತ್ರಣ ರೇಖೆ ಸನಿಹ ಒಳ ನುಸುಳುತ್ತಿದ್ದ ಉಗ್ರರೂ ಸೇರಿದ್ದಾರೆ.

ಜ.1ರಿಂದ ಆಗಸ್ಟ್ 29ರವರೆಗಿನ ಪಟ್ಟಿ ಇದಾಗಿದೆ. ಇದೇ ಅವಧಿಯಲ್ಲಿ ಸೇನೆಯ 26 ಮಂದಿ ಹುತಾತ್ಮರಾಗಿದ್ದರೆ. ಫೆಬ್ರವರಿ ಒಂದೇ ತಿಂಗಳಲ್ಲಿ ಸೇನೆಯ 8 ಮಂದಿ ಮೃತಪಟ್ಟಿದ್ದು ಗರಿಷ್ಠವಾಗಿದೆ. ಆಗಸ್ಟ್ ‌ನಲ್ಲಿ ಐವರು ಉಗ್ರರನ್ನು ಹತ್ಯೆಗೈದಿರುವುದಾಗಿ ಸೇನೆ ಹೇಳಿಕೊಂಡಿದೆ. ಮೇ ಒಂದೇ ತಿಂಗಳಲಿನಲ್ಲಿ 27 ಮಂದಿಯನ್ನು ಹತ್ಯೆಗೈದಿರುವುದಾಗಿ ಹೇಳಿದೆ.

ಇದೇ ವೇಳೆ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿ ಪ್ರಕರಣಗಳು ಏರಿಕೆಯಾಗಿವೆ. ಜುಲೈ ಒಂದೇ ತಿಂಗಳಿನಲ್ಲಿ 296 ಗುಂಡಿನ ದಾಳಿ ನಡೆದಿವೆ. ಕಳೆದ 8 ತಿಂಗಳಿನಲ್ಲಿ ಒಟ್ಟು 1889 ಗುಂಡಿನ ದಾಳಿಗಳು ನಡೆದಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ