ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
Team Udayavani, May 28, 2022, 10:07 PM IST
ತಿರುಪತಿ : ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಜನಸಾಗರವೇ ತುಂಬಿದೆ. ವಾರಾಂತ್ಯದ ಜತೆಯಲ್ಲಿ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತಾದಿಗಳು ದೇವರ ದರ್ಶನಕ್ಕೆ ಬಂದಿದ್ದಾರೆ.
“ಉಚಿತ ದರ್ಶನವಾಗಿರುವ ಸರ್ವ ದರ್ಶನಕ್ಕೆ ಬರೋಬ್ಬರಿ 48 ತಾಸುಗಳ ಕಾಲ ಕಾಯುವಂತಾಗಿದೆ. 4-5 ಕಿ.ಮೀ.ವರೆಗೆ ಸರತಿ ಸಾಲು ನಿಲ್ಲುತ್ತಿದೆ. ವೈಕುಂಠಂ ಸಂಕೀರ್ಣದಲ್ಲಿರುವ 33 ನಿರೀಕ್ಷಣಾ ಕೊಠಡಿಗಳೂ ಭರ್ತಿಯಾಗಿವೆ.
ಹಾಗಾಗಿ ಈ ಸಮಯದಲ್ಲಿ ಯಾವುದೇ ಭಕ್ತಾದಿಗಳು ತಿರುಪತಿಗೆ ಬರುವ ಯೋಜನೆಯನ್ನು ಹಾಕಿಕೊಂಡಿದ್ದರೆ, ದಯಮಾಡಿ ಯೋಜನೆಯನ್ನು ಮುಂದೂಡಿಕೊಳ್ಳಿ’ ಎಂದು ಟಿಟಿಡಿ ಹೇಳಿದೆ.
ಇದನ್ನೂ ಓದಿ : ನೂರರ ನೋಟಿಗೇ ಹೆಚ್ಚು ಬೇಡಿಕೆ! 2000 ರೂ. ನೋಟಿಗೆ ಇಲ್ಲ ಆದ್ಯತೆ