ಉಸಿರು ಕಟ್ಟಿಸಿ ತಿವಾರಿ ಪುತ್ರನ ಹತ್ಯೆ

Team Udayavani, Apr 20, 2019, 6:00 AM IST

ಹೊಸದಿಲ್ಲಿ: ಉತ್ತರಾಖಂಡದ ಮಾಜಿ ಸಿಎಂ ಎನ್‌ಡಿ ತಿವಾರಿ ಪುತ್ರ ರೋಹಿತ್‌ ಶೇಖರ್‌ ತಿವಾರಿಯನ್ನು ದಿಂಬಿನಿಂದ ಉಸಿರುಕಟ್ಟಿಸಿ ಹತ್ಯೆಗೈಯಲಾಗಿದೆ ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟ ರೋಹಿತ್‌, ಮರಣೋತ್ತರ ಪರೀಕ್ಷೆ ವರದಿ ಶುಕ್ರವಾರ ಲಭ್ಯವಾಗಿದೆ. ಈತನನ್ನು ಉಸಿರುಗಟ್ಟಿಸಿ ಹತ್ಯೆಗೈಯಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಹೀಗಾಗಿ ಪ್ರಕರಣವನ್ನು ಕೊಲೆ ಎಂದು ಪೊಲೀಸರು ಪರಿಗಣಿಸಿ ತನಿಖೆಗೆ ಮುಂದಾಗಿದ್ದಾರೆ. ಪ್ರಕರಣವನ್ನು ದಿಲ್ಲಿಯ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ರೋಹಿತ್‌ ಕಳೆದ ಮಂಗಳವಾರ ದಿಲ್ಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಸಾವನ್ನಪ್ಪಿದ್ದರು. ರೋಹಿತ್‌ ಎ. 12 ರಂದು ಉತ್ತರಾಖಂಡಕ್ಕೆ ಹೋಗಿ ಮತದಾನ ಮಾಡಿ 15 ರಂದು ವಾಪಸಾಗಿದ್ದರು. ಮನೆಯಲ್ಲಿರುವ ಸಿಸಿಟಿವಿ ಕೆಮರಾಗಳ ಪೈಕಿ ಎರಡು ಕೆಮರಾಗಳು ಕೆಲಸ ಮಾಡುತ್ತಿರಲಿಲ್ಲ. ಅವರು ಮತ್ತುಭರಿತ ಸ್ಥಿತಿಯಲ್ಲಿ ಗೋಡೆ ಹಿಡಿದುಕೊಂಡು ನಡೆ ಯುತ್ತಿರುವ ದೃಶ್ಯ ಸಿಸಿಟಿವಿಯಿಂದ ಪೊಲೀಸರಿಗೆ ಲಭ್ಯವಾಗಿದೆ. ತಾನು ಎನ್‌ಡಿ ತಿವಾರಿ ಪುತ್ರ ಎಂಬುದನ್ನು ಸಾಬೀತುಪಡಿಸಲು ಸುಮಾರು ಆರು ವರ್ಷಗಳವರೆಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಯಶಸ್ಸು ಗಳಿಸಿದ್ದರು. ಆರಂಭದಲ್ಲಿ ಡಿಎನ್‌ಎ ಪರೀಕ್ಷೆಗೆ ಎನ್‌.ಡಿ. ತಿವಾರಿ ನಿರಾಕರಿಸಿ, ರೋಹಿತ್‌ ನನ್ನ ಮಗನಲ್ಲ ಎಂದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ