ಇದೇ ಮೊದಲು: TMC ಲೋಕಸಭಾ ಅಭ್ಯರ್ಥಿಗಳಲ್ಲಿ ಮಹಿಳೆಯರು ಶೇ.40.5
Team Udayavani, Mar 13, 2019, 6:39 AM IST
ಕೋಲ್ಕತ : ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ 2019ರ ಲೋಕಸಭಾ ಚುನಾವಣೆಗೆ ತನ್ನ ಪಕ್ಷದಿಂದ ಸ್ಪರ್ಧಿಸುವ 42 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ. ಈ ಪೈಕಿ 17 ಮಂದಿ ಮಹಿಳೆಯರು ಎನ್ನುವುದು ಗಮನಾರ್ಹವಾಗಿದೆ.
ಈ ಬಾರಿ ಕಣಕ್ಕಿಳಿಯುವ ಟಿಎಂಸಿ ಅಭ್ಯರ್ಥಿಗಳ ಪೈಕಿ ಮಹಿಳೆಯರ ಪ್ರಮಾಣ ಇದೇ ಮೊದಲ ಬಾರಿಗೆ ಶೇ.40.5 ಆಗಿದೆ. ಕಳೆದ ಬಾರಿ ಇದು ಶೇ.35 ಆಗಿತ್ತು.
ಮಮತಾ ಅವರು ಮಾಡಿರುವ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ : ಮಾ, ಮಾಟಿ, ಮಾನುಷ್ ಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ಎಲ್ಲರಿಗೂ ಶುಭಾಶಯಗಳು. ಬಂಗಾಲ ಮತ್ತು ಇತರ ಕೆಲವು ರಾಜ್ಯಗಳಿಂದ ಲೋಕಸಭೆಗೆ ಸ್ಪರ್ಧಿಸುವ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯನ್ನು ನಾವು ಪ್ರಕಟಿಸಿದ್ದೇವೆ. ನನಗೆ ಎಲ್ಲಕ್ಕಿಂತ ದೊಡ್ಡ ಸಂತಸವೆಂದರೆ ನಾವು ಪ್ರಕಟಿಸಿರುವ 42 ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರ ಪಾಲು ಶೇ.41 ಇದೆ. ತೃಣಮೂಲದ ಈ ಪಟ್ಟಿಯೇ ವೈವಿಧ್ಯತೆಯಲ್ಲಿ ಏಕತೆ ಇರುವುದನ್ನು ಹೇಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್