ಕಾರ್ಡ್‌ ಚಳುವಳಿ: ಪ್ರಧಾನಿಗೆ ಟಿಎಂಸಿ ಕಾರ್ಯಕರ್ತರಿಂದ 10 ಸಾವಿರ ಕಾರ್ಡ್‌

ನಾವು ಪ್ರಧಾನಿ ಕಾರನ್ನು ಅಡ್ಡಗಟ್ಟಿ ಘೋಷಣೆಗಳನ್ನು ಕೂಗುವುದಿಲ್ಲ...

Team Udayavani, Jun 4, 2019, 5:45 PM IST

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಹಲವು ರೀತಿಯಲ್ಲಿ ರಾಜಕೀಯ ಸಮವ ಮುಂದುವರಿಯುತ್ತಿದೆ. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್‌ ಎಂದು ಬರೆದಿದ್ದ 10 ಲಕ್ಷ ಕಾರ್ಡ್‌ಗಳನ್ನು ಕಳಿಸುವುದಾಗಿ ಹೇಳಿದ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 10 ರಸಾವಿರ ಕಾರ್ಡ್‌ಗಳನ್ನು ಕಳುಹಿಸುವುದಾಗಿ ಹೇಳಿದ್ದಾರೆ.

ಡಂ ಡಂನ ಟಿಎಂಸಿ ಕಾರ್ಯಕರ್ತರು, ವಂದೇ ಮಾತರಂ, ಜೈ ಹಿಂದ್‌ ಮತ್ತು ಜೈ ಬಾಂಗ್ಲಾ ಎಂದು ಬರೆದಿರುವ 10 ಸಾವಿರ ಕಾರ್ಡ್‌ಗಳನ್ನು ಪ್ರಧಾನಿಗೆ ಕಳುಹಿಸುತ್ತಿದ್ದಾರೆ.

ದಕ್ಷಿಣ ದಮ್ ದಮ್ ಪುರಸಭೆಯ ಕೌನ್ಸಿಲ್ ಅಧ್ಯಕ್ಷರಾಗಿರುವ ಡಿ ಬ್ಯಾನರ್ಜಿ ಅವರು ಮಾತನಾಡಿ ,ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ನಾವು ತೋರಿಸುತ್ತಿದ್ದೇವೆ. ನಾವು ಪ್ರಧಾನಿ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗುವುದಿಲ್ಲ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಕಾರಿನ ಎದುರು ಜೈ ಶ್ರೀರಾಮ್‌ ಎನ್ನುವ ಘೋಷಣೆಗಳನ್ನುಕೂಗಲಾಗಿತ್ತು, ಇದು ಬ್ಯಾನರ್ಜಿ ಅವರನ್ನು ತೀವ್ರವಾಗಿ ಕೆರಳಿಸಿತ್ತು ಮತ್ತು 10 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ