‘ಟುಡೇಸ್ ಚಾಣಕ್ಯ’ BJP ಅಧ್ಯಕ್ಷ ಅಮಿತ್ ಶಾ 54; ಪ್ರಧಾನಿ ಅಭಿನಂದನೆ
Team Udayavani, Oct 22, 2018, 11:53 AM IST
ಪಣಜಿ : ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು “ಟುಡೇಸ್ ಚಾಣಕ್ಯ’ ಎಂದು ಕರೆಯುವ ಮೂಲಕ ಶಾ ಅವರಿಗೆ 54ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಉತ್ತರ ಗೋವೆಯ ಬಿಜೆಪಿ ಲೋಕಸಭಾ ಸದಸ್ಯರಾಗಿರುವ ನಾಯಕ್ ಅವರು ಟ್ವಿಟರ್ ಮೂಲಕ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ “ನಮ್ಮ ಪ್ರಧಾನ್ ಸೇವಕ್ (ಪ್ರಧಾನಿ ಮೋದಿ) ಅವರ ವಿಜಯ ರಥವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಇಂದಿನ ಚಾಣಕ್ಯ’ ಎಂದು ಶಾ ಅವರನ್ನು ಅಭಿನಂದಿಸಿದ್ದಾರೆ. “ಪಕ್ಷದ ಕಾರ್ಯಕರ್ತರೊಂದಿಗಿನ ನೇರ ವೈಯಕ್ತಿಕ ಸಂಬಂಧ ಮತ್ತು ನಿಮ್ಮ ಸಿದ್ಧಾಂತಗಳಿಗೆ ನೀವು ಹೊಂದಿರುವ ಬದ್ಧತೆಯಿಂದಾಗಿ ನೀವು “ಟುಡೇಸ್ ಚಾಣಕ್ಯ’ ಆಗಿರುವಿರಿ’ ಎಂದು ನಾಯಕ್ ಪ್ರಶಂಸೆಯ ಮಾತುಗಳನ್ನು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಿಮ್ಮ ಕಠಿನ ಪರಿಶ್ರಮ ಪಕ್ಷಕ್ಕೊಂದು ಆಸ್ತಿ ಎಂದು ಪ್ರಶಂಸಿಸಿದ್ದಾರೆ.
“ಅಮಿತ್ ಭಾಯಿ ನಾಯಕತ್ವದಿಂದಾಗಿ ಇಂದು ಬಿಜೆಪಿ ರಾಷ್ಟ್ರದ ಉದ್ದಗಲಕ್ಕೆ ವ್ಯಾಪಿಸಿಕೊಂಡಿದೆ. ಈ ದಿಶೆಯಲ್ಲಿನ ಅವರ ಪ್ರಯತ್ನ ಮತ್ತು ಕಠಿನ ಪರಿಶ್ರಮ ಪಕ್ಷಕ್ಕೆ ಆಸ್ತಿಯಾಗಿದೆ’ ಎಂದು ಹೇಳಿರುವ ಪ್ರಧಾನಿ, ಅಮಿತ್ ಶಾಗೆ ದೀರ್ಘ ಆಯುರಾರೋಗ್ಯ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ