ಖ್ಯಾತ ನೃತ್ಯಪಟು ಕ್ವೀನ್‌ ಹರೀಶ್‌ ಸೇರಿ ಮೂವರು ಅಪಘಾತಕ್ಕೆ ಬಲಿ

ಸ್ತ್ರೀವೇಷ ಧರಿಸಿ ಹೆಣ್ಣೂ ನಾಚುವಂತೆ ನರ್ತಿಸುತ್ತಿದ್ದ ಹರೀಶ್‌

Team Udayavani, Jun 2, 2019, 5:02 PM IST

ಜೋಧ್‌ಪುರ್‌ : ವಿಶ್ವ ಖ್ಯಾತಿಯ ನೃತ್ಯಗಾರ ಕ್ವೀನ್‌ ಹರೀಶ್‌ ಸೇರಿ ಮೂವರು ನೃತ್ಯ ಪಟುಗಳು ಭಾನುವಾರ ಜೋಧ್‌ಪುರದ ಹೆದ್ದಾರಿಯ ಕಾಪರ್ದ ಬಳಿ ನಡೆದ ಅಪಘಾತದಲ್ಲಿ ಬಲಿಯಾಗಿದ್ದಾರೆ.

ಜೈಸೇಲ್‌ಮೇರ್‌ನಿಂದ ಅಜ್ಮೀರ್‌ಗೆ ಎಸ್‌ಯುವಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಕಾರು ಸರಕು ಸಾಗಿಸುತ್ತಿದ್ದ ಲಾರಿಗೆ ಢಿಕ್ಕಿಯಾಗಿದ್ದು, ಹರೀಶ್‌ , ರವೀಂದ್ರ ಮತ್ತು ಭಿಕೆ ಖಾನ್‌ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಹರೀಶ್‌ ಮತ್ತು ಕಲಾವಿದರಿಬ್ಬರ ದರ್ಮರಣಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಜೈಸೇಲ್‌ಮೇರ್‌ ನಿವಾಸಿಯಾಗಿದ್ದ ಹರೀಶ್‌ ಕುಮಾರ್‌ ಅವರು ಜಾನಪದ ನೃತ್ಯದ ಮೂಲಕ ಖ್ಯಾತರಾಗಿದ್ದರು. ಸ್ತ್ರೀವೇಷ ಧರಿಸಿ ಹೆಣ್ಣನ್ನೂ ನಾಚಿಸುವಂತೆ ನರ್ತಿಸಿ ವಿಶ್ವಖ್ಯಾತಿ ಪಡೆದು ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಕ್ವೀನ್‌ ಎಂಬ ಬಿರುದು ಅವರ ಹೆಸರನ್ನುಸೇರಿಕೊಂಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ