ಉತ್ತರ ಪ್ರದೇಶ : ಆಮೆ ಪಾರ್ಕ್‌ಗೆ ಜಮೀನು

Team Udayavani, Nov 14, 2019, 1:19 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಕ್ನೋ: ಮೂವತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಆಮೆ ಪಾರ್ಕ್‌ಗೆ ಜಮೀನು ನೀಡಲು ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರ ನಿರ್ಧರಿಸಿದೆ. ಆರಂಭದಲ್ಲಿ ಅದನ್ನು ವಾರಾಣಸಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿತ್ತಾದರೂ, ಅದನ್ನು ಈಗ ಅಲಹಾಬಾದ್‌ಗೆ ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ.

ಭಾರತದ ವನ್ಯಜೀವಿಗಳ ಅಧ್ಯಯನಾ ಸಂಸ್ಥೆ ಈ ಬಗ್ಗೆ ಸಮೀಕ್ಷೆಯನ್ನೂ ನಡೆಸಿದೆ. ಪ್ರಸ್ತಾವಿತ ಆಮೆಗಳ ಪಾರ್ಕ್‌ 7 ಕಿಮೀ ಉದ್ದ ಇರಲಿದೆ. 1989ರಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಬಳಿಕ ಅದು ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ