ಸೆಗಣಿಯಿಂದ ಕಾರು ಕೂಲ್‌

ಸೆಗಣಿ ಬಳಿದ ಕಾರು ಈಗ ಇಂಟರ್ನೆಟ್‌ ಸೆನ್ಸೇಷನ್‌

Team Udayavani, May 26, 2019, 6:02 AM IST

ಅಹಮದಾಬಾದ್‌: ಗಂಟೆಗಟ್ಟಲೆ ಬಿಸಿಲಿನ ಝಳದಲ್ಲಿ ನಿಂತಿದ್ದ ಕಾರಿನೊಳಗೆ ಕುಳಿತೊಡನೆ ನಾವೂ ಬೆಂದುಹೋದಂತೆ ಭಾಸವಾಗುತ್ತದೆ. ಆದರೆ, ಗುಜರಾತಿನ ಈ ಮಹಿಳೆಯ ಕಾರು ಎಷ್ಟೇ ಬಿಸಿಲಲ್ಲಿ ನಿಂತಿದ್ದರೂ, ಅದರೊಳಗೆ ಮಾತ್ರ ಕೂಲ್‌ ಕೂಲ್‌ ಅನುಭವ!

ಎ.ಸಿ. ಹಾಕಿರಬಹುದೆಂದು ಯೋಚಿಸುತ್ತಿ ದ್ದೀರಾ? ಖಂಡಿತಾ ಇಲ್ಲ. ಅಹಮದಾಬಾದ್‌ನ ಸೇಜಲ್‌ ಶಾ ಅವರು ತಮ್ಮ ಕಾರಿಗೆ ಸಂಪೂರ್ಣವಾಗಿ ಸೆಗಣಿ ಬಳಿದಿದ್ದಾರೆ. ಅದರ ಎಫೆಕ್ಟೇ ಈ ತಂಪು ತಂಪು ಕೂಲ್‌ ಕೂಲ್‌ಗೆ ಕಾರಣ.

ಹೌದು, ಸೇಜಲ್‌ ಅವರು ತಮ್ಮ ಟೊಯೋಟಾ ಆಲ್ಟಿಸ್‌ ಕಾರಿನ ಹೊರಭಾಗದಲ್ಲಿ ದಪ್ಪವಾಗಿ ಸೆಗಣಿ ಬಳಿದಿದ್ದಾರೆ. ಇದರಿಂದ ಕಾರು ಎಷ್ಟೇ ಬಿಸಿಲಲ್ಲಿ ನಿಂತಿದ್ದರೂ, ಒಳಗೆ ಎಸಿ ಹಾಕಿದಷ್ಟೇ ತಂಪಾಗಿರುತ್ತದೆ. ಹಾಗೆಯೇ, ಚಳಿಗಾಲದಲ್ಲಿ ಒಳಗೆ ಬೆಚ್ಚಗಿರುತ್ತದೆ ಎನ್ನುತ್ತಾರೆ ಸೇಜಲ್‌. ಈ ಎರಡೂ ಅನುಕೂಲತೆಯ ಜೊತೆಗೆ, ಜಾಗತಿಕ ತಾಪಮಾನ ಹೆಚ್ಚಾಗಿರುವಂಥ ಈ ಸಮಯದಲ್ಲಿ ಪರಿಸರ ಸಂರ ಕ್ಷಣೆಯೂ ಆಗುತ್ತಿದೆ, ಮಾಲಿನ್ಯವೂ ಕಡಿಮೆ ಯಾಗುತ್ತದೆಯಂತೆ.ನಾನು ಆರಂಭದಲ್ಲಿ ಮನೆಯ ನೆಲ ಹಾಗೂ ಗೋಡೆಗಳಿಗೆ ಸೆಗಣಿ ಬಳಿಯುತ್ತಿದ್ದೆ. ಅದ  ರಿಂದ ಮನೆ ಕೂಲ್‌ ಆಗಿರುತ್ತಿತ್ತು. ಹಾಗಾಗಿ ಕಾರಿಗೂ ಇದನ್ನೇ ಬಳಸಿದರೆ ಹೇಗೆ ಎಂಬ ಯೋಚನೆ ಬಂತು. ಅದು ಈಗ ಯಶ ಸ್ವಿಯೂ ಆಯಿತು ಎಂದೂ ಸೇಜಲ್‌ ಹೇಳಿದ್ದಾರೆ. ಸೆಗಣಿ ಬಳಿದಿರುವ ಈ ಕಾರು ಈಗ ಇಂಟರ್ನೆಟ್‌ ಸೆನ್ಸೇಷನ್‌ ಆಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ