ಬರೋಬ್ಬರಿ 1,41 ಲಕ್ಷ ದಂಡ ತೆತ್ತ ಟ್ರಕ್ ಚಾಲಕ

ದೇಶದಲ್ಲೇ ಅತೀ ಹೆಚ್ಚು ಮೊತ್ತದ ದಂಡ ಪಾವತಿಗೆ ಸಾಕ್ಷಿಯಾದ ರಾಜಸ್ಥಾನ

Team Udayavani, Sep 11, 2019, 8:07 AM IST

ರಾಜಸ್ಥಾನ : ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ವಾಹನ ಸವಾರರು ಭಾರೀ ಮೊತ್ತದ ದಂಡ ತೆರುತ್ತಿದ್ದಾರೆ. ಇದೀಗ ಟ್ರಕ್ ಚಾಲಕರೊಬ್ಬರು ದೇಶದಲ್ಲೇ ಅತೀ ಹೆಚ್ಚು ಮೊತ್ತದ ದಂಡ ಪಾವತಿಸಿ ಸುದ್ದಿಯಾಗಿದ್ದಾರೆ.

ಟ್ರಕ್ ಓವರ್ ಲೋಡ್ ಮಾಡಿದ ಕಾರಣ ಭಗವಾನ್ ರಾಮ್ ಎಂಬ ಚಾಲಕನಿಗೆ ಬರೋಬ್ಬರಿ 1.41 ಲಕ್ಷ ದಂಡ ವಿಧಿಸಲಾಗಿದೆ. ಇದು ದೇಶದಲ್ಲೇ ಈವರೆಗೆ ವಿಧಿಸಲಾದ ಅತೀ ದೊಡ್ಡ ದಂಡದ ಮೊತ್ತ ಎಂದು ಪರಿಗಣಿಸಲ್ಪಟ್ಟಿದೆ.

ಈ ಹಿಂದೆ ಸಂಚಾರಿ ನಿಯಮ ಉಲ್ಲಂಘನೆಗೆ ಒಡಿಶಾದ ಟ್ರಕ್ ಚಾಲಕನಿಗೆ 86,500 ರೂ ದಂಡ ವಿಧಿಸಲಾಗಿತ್ತು. ಟ್ರಕ್ ಚಲಾಯಿಸಲು ಅನಧಿಕೃತ ವ್ಯಕ್ತಿಗೆ ಅವಕಾಶ ಕೊಟ್ಟಿದ್ದು, ಲೈಸನ್ಸ್ ಇಲ್ಲದೆ ಚಾಲನೆ, ಓವರ್ ಲೋಡಿಂಗ್ ಸಹಿತ ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿ ಈ ದಂಡ ತೆತ್ತಿದ್ದ. ಈ ದಾಖಲೆಯ ಮೊತ್ತ ಇದೀಗ ಪತನವಾಗಿದೆ.

ಚಾಲಕ ಭಗವಾನ್ ರಾಮ್ ಗೆ ಈ ಪರಿ ದಂಡ ವಿಧಿಸಿದ ಚಲನ್ ನ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬರೋಬ್ಬರಿ 1,41,700 ರೂ ದಂಡ ಮೊತ್ತವನ್ನು ಕಂಡು ಚಾಲಕ ಹೌಹಾರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ