ಮುಂಬೈ: ರೈಲಿನಲ್ಲಿ ಪತ್ನಿಗೆ ಸೀಟು ಕೊಡಿ ಎಂದು ಕೇಳಿದ ಪತಿಯನ್ನು ಹೊಡೆದು ಕೊಂದ ಪ್ರಯಾಣಿಕರು!

ಪತ್ನಿ ಜ್ಯೋತಿ, ಎರಡು ವರ್ಷದ ಪುತ್ರಿ ಜತೆಗೆ ಬುಧವಾರ ರಾತ್ರಿ ಕಲ್ಯಾಣ್ ಸ್ಟೇಶನ್ ನಲ್ಲಿ ರೈಲು ಹತ್ತಿದ್ದರು.

Team Udayavani, Feb 14, 2020, 11:25 AM IST

ಮುಂಬೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪತ್ನಿಗೆ ಸೀಟು ಕೊಡಿ ಎಂದು ಕೇಳಿದ್ದಕ್ಕೆ ಪತಿಯನ್ನು 12 ಮಂದಿ ಹಿಗ್ಗಾಮುಗ್ಗಾ ಹೊಡೆದು ಕೊಂದು ಹಾಕಿರುವ ಘಟನೆ ಮುಂಬೈ-ಲಾತೂರ್, ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಮುಂಬೈನ ಕಲ್ಯಾಣ್ ನಿವಾಸಿ ಸಾಗರ್ ಮಾರ್ಕಂಡ್ (29ವರ್ಷ) ಹಾಗೂ ಪತ್ನಿ ಜ್ಯೋತಿ, ಎರಡು ವರ್ಷದ ಪುತ್ರಿ ಜತೆಗೆ ಬುಧವಾರ ರಾತ್ರಿ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಜನರಲ್ ಕಂಪಾರ್ಟ್ ಮೆಂಟ್ ಜನರಿಂದ ತುಂಬಿ ಹೋಗಿತ್ತು. ಈ ಸಂದರ್ಭದಲ್ಲಿ ಕೆಲವು ಮಹಿಳೆಯರ ಬಳಿ ಪತ್ನಿಗೆ ಕುಳಿತುಕೊಳ್ಳಲು ಸ್ವಲ್ಪ ಸ್ಥಳ ಕೊಡಿ ಎಂದು ಕೇಳಿಕೊಂಡಿರುವುದಾಗಿ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಸಾಟೋರೆ ತಿಳಿಸಿದ್ದಾರೆ.

ಮಾರ್ಕಂಡ್ ಮನವಿ ಕೇಳಿದ ಮಹಿಳೆಯರು ಕೋಪಗೊಂಡು ಬೈಯ್ಯಲು ಆರಂಭಿಸಿದ್ದರು. ಇದರಿಂದ ವಾಗ್ವಾದ ನಡೆದು ಮಹಿಳೆಯರು ಹಾಗೂ ಗಂಡಸರು ಸೇರಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಪತ್ನಿ ಹೊಡೆಯಬೇಡಿ ಎಂದು ಅಂಗಲಾಚಿದರೂ ಸುಮಾರು ಒಂದು ತಾಸುಗಳ ಕಾಲ ಹೊಡೆದಿದ್ದರು. ರೈಲು ದೌಂಡ್ ಸ್ಟೇಶನ್ ನಲ್ಲಿ ನಿಂತಾಗ ಕೂಡಲೇ ರೈಲ್ವೆ ಪೊಲೀಸರು ಮಾರ್ಕಂಡ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಾರ್ಕಂಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಕಂಡ್ ಮತ್ತು ಪತ್ನಿ ಸೋಲಾಪುರ್ ಜಿಲ್ಲೆಯ ಕುರ್ದುವಾಡಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಆರು ಮಹಿಳೆಯರು ಹಾಗೂ ನಾಲ್ವರು ಗಂಡಸರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸಾಟೋರೆ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ