ಪ್ರಯಾಣಿಕರಿಂದಲೇ ರೈಲಿನ ಸ್ವಚ್ಛತೆ ರೇಟಿಂಗ್
Team Udayavani, Apr 2, 2018, 7:21 AM IST
ಹೊಸದಿಲ್ಲಿ: ರೈಲು ಮತ್ತು ರೈಲು ನಿಲ್ದಾಣಗಳಲ್ಲಿನ ಸ್ವಚ್ಛತೆಗೆ ಇನ್ನು ಪ್ರಯಾಣಿಕರೇ ರೇಟಿಂಗ್ ನೀಡುವ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಜಾರಿಗೆ ತರಲಿದೆ. ಇದರಿಂದ ಸ್ವಚ್ಛತೆ ನಿರ್ವಹಣೆ ಮಾಡುವ ಗುತ್ತಿಗೆದಾರರ ಮೇಲೆ ನೇರವಾಗಿ ಪರಿಣಾಮ ಉಂಟಾಗಲಿದ್ದು, ಆ ಗುತ್ತಿಗೆದಾರರ ರೇಟಿಂಗ್ ಕೂಡ ಕಡಿಮೆಯಾಗಲಿದೆ.
ಇದಲ್ಲದೆ ಸ್ವಚ್ಛತೆಗಾಗಿ ಸಂಪೂರ್ಣ ರೇಟಿಂಗ್ ವ್ಯವಸ್ಥೆಯನ್ನು ಪ್ರಸ್ತಾವಿಸಲಾಗಿದೆ. ಉತ್ತಮ ರೇಟಿಂಗ್ ಪಡೆಯುವ ಗುತ್ತಿಗೆದಾರರಿಗೆ ಪ್ರೋತ್ಸಾಹ ಧನ ನೀಡಿದರೆ ಕಡಿಮೆ ರೇಟಿಂಗ್ ಪಡೆಯುವ ಗುತ್ತಿಗೆದಾರರ ಒಪ್ಪಂದವನ್ನು ರದ್ದುಗೊಳಿಸಲಾಗುತ್ತದೆ ಹಾಗೂ ದಂಡ ವಿಧಿಸಲಾಗುತ್ತದೆ. ಶೇ.30ರಷ್ಟು ದಂಡ ಮತ್ತು ಪ್ರೋತ್ಸಾಹಧನವು ಪ್ರಯಾಣಿಕರ ರೇಟಿಂಗ್ ಅವಲಂಬಿಸಿರುತ್ತದೆ. ಉಳಿದಂತೆ ಸಿಬ್ಬಂದಿ ಹಾಜರಾತಿ, ಗುಣಮಟ್ಟದ ಸಾಮಗ್ರಿಗಳ ಬಳಕೆ, ಬಟ್ಟೆಗಳ ವಿತರಣೆ, ನಿರ್ವಹಣೆ ಮತ್ತು ಸೇವೆಯನ್ನು ಅವಲಂಬಿಸಿಯೂ ಗುತ್ತಿಗೆದಾರರಿಗೆ ದಂಡ ಮತ್ತು ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರಯಾಣಿಕರ ರೇಟಿಂಗ್ಗೆ ಜಿಪಿಎಸ್ ಆಧರಿತವಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲ ಎಂದಿದೆ ರೈಲ್ವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್