ಬುಡಕಟ್ಟು ಸ್ಥಾನಮಾನ ನೀಡುವಂತೆ ಆಗ್ರಹ

Team Udayavani, Aug 19, 2019, 6:29 AM IST

ಲೇಹ್‌: ಲಡಾಖ್‌ನ ಜನರ ಭೂಮಿ ಮತ್ತು ವೈಶಿಷ್ಟ್ಯತೆ ಕಾಪಾಡುವುದಕ್ಕಾಗಿ ಸಂವಿಧಾನದ ಆರನೇ ಪರಿಚ್ಛೇದಕ್ಕೆ ಅನುಗುಣವಾಗಿ ಲಡಾಖ್‌ಗೆ ಬುಡಕಟ್ಟು ಪ್ರದೇಶದ ಸ್ಥಾನಮಾನ ನೀಡುವಂತೆ ಪ್ರಮುಖ ಮುಖಂಡರು ಆಗ್ರಹಿಸಿದ್ದಾರೆ.

370ನೇ ವಿಧಿಯನ್ನು ರದ್ದುಗೊಳಿಸಿರುವುದು ಮತ್ತು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಈ ಮುಖಂಡರು ಬೆಂಬಲಿಸಿದ್ದಾರಾದರೂ, ಹೊರಗಿನ ಜನರು ಆಗಮಿಸಿ ಈ ಭಾಗದ ಸಂಸ್ಕೃತಿ ಮತ್ತು ವೈಶಿಷ್ಟ್ಯವನ್ನು ಹಾಳುಗೆಡವಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಲಡಾಖ್‌ನಲ್ಲಿ ಒಟ್ಟು ಶೇ.98ರಷ್ಟು ಜನರು ಬುಡಕಟ್ಟು ಜನರಾಗಿದ್ದಾರೆ. ಹೀಗಾಗಿ ಈ ಪ್ರದೇಶವನ್ನು ಬುಡಕಟ್ಟು ಪ್ರದೇಶ ಎಂದು ಪರಿಗಣಿಸುವಂತೆ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾಗೆ ಬಿಜೆಪಿ ಸಂಸದ ಜಮ್ಯಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ನೇತೃತ್ವದಲ್ಲಿ ಮುಖಂಡರು ಮನವಿ ಪತ್ರ ಸಲ್ಲಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ