ಬುಡಕಟ್ಟು ಮಹಿಳೆಗೂ ಆಸ್ತಿಯಲ್ಲಿ ಹಕ್ಕಿದೆ: ಸುಪ್ರೀಂಕೋರ್ಟ್
Team Udayavani, Dec 9, 2022, 7:52 PM IST
ನವದೆಹಲಿ: ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಕೂಡ ಪುರುಷನಷ್ಟೇ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾಳೆ. ಅಂತಾರಾಜ್ಯ ಬುಡಕಟ್ಟು ವಿಚಾರದಲ್ಲೂ ಇದು ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನ್ಯಾ.ಎಂ.ಆರ್.ಶಾ ಮತ್ತು ನ್ಯಾ.ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಬುಡಕಟ್ಟು ಸಮುದಾಯಕ್ಕೆ ಸೇರದೇ ಇರುವ ಮಹಿಳೆ ಕೂಡ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕುದಾರಳಾಗಿರುವಾಗ, ಬುಡಕಟ್ಟು ಸಮುದಾಯಕ್ಕೆ ಸೇರಿರುವ ಮಹಿಳೆಯರೇಕೆ ಅದರಿಂದ ವಂಚಿತರಾಗಬೇಕು ಎಂದು ನ್ಯಾಯಪೀಠ ಪ್ರಶ್ನಿಸಿತು.
ಜತೆಗೆ, ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ
263 ಕೋಟಿ ರೂ ಅಕ್ರಮ; ಮಾಜಿ ತೆರಿಗೆ ಅಧಿಕಾರಿ, ನಟಿ ಕೃತಿ ವರ್ಮಾ ವಿಚಾರಣೆ
ಚಂದ್ರಯಾನ-3 ಇಳಿದಾಣಗಳ ಗುರುತು ಪೂರ್ಣ; ವರ್ಷಾಂತ್ಯಕ್ಕೆ ಉಡಾವಣೆ ಸಾಧ್ಯತೆ
ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!
ಮಗುವಿನ ಜತೆಗೆ ಬಾಡಿಗೆ ತಾಯಿ ಬಾಂಧವ್ಯ ಹೊಂದಿರಬೇಕಾಗಿಲ್ಲ: ಕೇಂದ್ರ