ನಮ್ಮ ಅಭ್ಯರ್ಥಿಯೋರ್ವರ ಮೇಲೆ ಹಲ್ಲೆ, ತಲೆಗೆ ಏಟು : ಟಿಎಂಸಿ ಆರೋಪ
Team Udayavani, Apr 6, 2021, 3:54 PM IST
ಪಶ್ಚಿಮ ಬಂಗಾಳ : ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯನ್ನು ಬಂಗಾಳದ ಮತಗಟ್ಟೆಯಿಂದ ಓಡಿಸಿದ ಘಟನೆ ನಡೆದಿದೆ ಎಂಬ ವರದಿಯಘಿದೆ.
ಜನರ ಗುಂಪಿನಿಂದ ತೃಣಮೂಲದ ಸುಜಾತಾ ಮೊಂಡೋಲ್ ಖಾನ್ ಅವರನ್ನು ಲಾಠಿಗಳೊಂದಿಗೆ ಬೆನ್ನಟ್ಟಸಿ ಓಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ, “ಬಿಜೆಪಿ ಕಾರ್ಯಕರ್ತರು ತೃಣಮೂಲ ಅಭ್ಯರ್ಥಿ ಸುಜಾತಾ ಮೊಂಡಾಲ್ ಅವರನ್ನು ಬೆನ್ನಟ್ಟಿದ್ದಲ್ಲದೇ, ಮತಗಟ್ಟೆಯ ಬಳಿ ತಲೆಗೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಓದಿ : ಬೆಳಗಾವಿ ಉಪಚುನಾವಣೆ ಅಖಾಡಕ್ಕೆ ಸಿಎಂ ಯಡಿಯೂರಪ್ಪ: ಮಂಗಲಾ ಅಂಗಡಿ ಪರ ಮತಯಾಚನೆ
ಇನ್ನು ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ.
ಅಲಿಪುರ್ದುರ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಮತಗಟ್ಟೆಗೆ ಭೇಟಿ ನೀಡಿದಾಗ ಅವರು ಗಂಭೀರವಾಗಿ ಹೊಡೆದು ನಮ್ಮ ಪಕ್ಷದ ಎಸ್ ಸಿ ಅಭ್ಯರ್ಥಿ ಸುಜಾತ ಅವರನ್ನು ಗಾಯಗೊಳಿಸಿದ್ದಾರೆ. ಖಾನಕುಲ್ ನಲ್ಲಿಯೂ ಕೂಡ ಮತ್ತೊಬ್ಬ ಅಭ್ಯರ್ಥಿಯನ್ನು ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಕ್ಯಾನಿಂಗ್ ಈಸ್ಟ್ ನಲ್ಲಿ, ಭದ್ರತಾ ಪಡೆಗಳು ನಮ್ಮ ನಾಮಿನಿ ಶೌಕತ್ ಮೊಲ್ಲಾ ಅವರನ್ನು ಬೂತ್ ಗೆ ಪ್ರವೇಶಿಸದಂತೆ ರಕ್ಷಣಾ ಪಡೆಗಳು ತಡೆದವು. ಹೀಗೆ ರಾಜ್ಯಾದ್ಯಂತ ನಮ್ಮ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಹಲವಾರು ನಿದರ್ಶನಗಳು ನಡೆದಿವೆ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರೂ ಕೂಡ ಏನೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು, ಸುದ್ದಿ ಸಂಸ್ಥೆ ಎ ಎನ್ ಐ ಗೆ ಪ್ರತಿಕ್ರಿಯಿಸಿದ ಸುಜಾತ ಮೊಂಡಾಲ್ ಖಾನ್, ಬಟನಾಲ್ ನ ಮತಗಟ್ಟೆ ಸಂಖ್ಯೆ 45 ರಲ್ಲಿ, ಟಿಎಂಸಿಯ ಚಿಹ್ನೆಯನ್ನು ಒತ್ತಿದರೂ, ಮತವು ಬಿಜೆಪಿಗೆ ಹೋಗುತ್ತಿದೆ. ನಾನು ಜನರ ಆಶೀರ್ವಾದ ಪಡೆಯುತ್ತೇನೆ ಎಂದು ನಂಬುತ್ತೇನೆ. ಅರಾಂಡಿಯಲ್ಲಿ, ನಮ್ಮ ಕಾರ್ಮಿಕರನ್ನು ಥಳಿಸಲಾಗಿದೆ. ಹಿಂಸಾಚಾರವನ್ನು ಸೃಷ್ಟಿಸುವ ಮೂಲಕ ಅರಂಬಾಗ್ ಸ್ಥಾನ ಸಿಗುತ್ತದೆ ಎಂದು ಅವರು (ಬಿಜೆಪಿ) ಯೋಚಿಸುತ್ತಿದ್ದಾರೆ. ಅವರು ತಪ್ಪಾಗಿ ಗ್ರಹಿಸುತ್ತಿದ್ದಾರೆ. ನಾನು ಸಾವಿಗೆ ಹೆದರದ ವ್ಯಕ್ತಿ ಎಂದು ಹೇಳಿದ್ದಾರೆ.
ಓದಿ : ತನ್ನ ವ್ಯಾಪಾರ ವಹಿವಾಟಿಗೆ ಫುಲ್ ಸ್ಟಾಪ್ ಇಟ್ಟ ಮೊಬೈಲ್ ಫೋನ್ ದೈತ್ಯ ಎಲ್ ಜಿ..!?