‘ಕುರಾನ್‌ಗೆ ಬದ್ಧವಾಗಿರದ ತ್ರಿವಳಿ ತಲಾಕ್‌ ಮಸೂದೆ ಒಪ್ಪಿತವಲ್ಲ’

Team Udayavani, Dec 27, 2017, 7:34 PM IST

ಲಕ್ನೋ : ಲೋಕಸಭೆಯಲ್ಲಿ ಇದೇ ಡಿ.28ರ ಗುರುವಾರದಂದು ಮಂಡಿಸಲ್ಪಡುವ ತ್ರಿವಳಿ ತಲಾಕ್‌ ನಿಷೇಧ ಮಸೂದೆಯು ಒಂದೊಮ್ಮೆ ಪವಿತ್ರ ಗ್ರಂಥ ಕುರಾನ್‌ ಮತ್ತು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ಅದು ನಮಗೆ ಸ್ವೀಕಾರಾರ್ಹವಲ್ಲ ಎಂದು ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಇಂದು ಬುಧವಾರ ಹೇಳಿವೆ. 

”ನಿಕಾಹ್‌ (ಮದುವೆ) ಅನ್ನುವುದು ಒಂದು ಒಪ್ಪಂದ. ಅದನ್ನು ಯಾರೇ ಮುರಿದರೂ ಅವರಿಗೆ ಶಿಕ್ಷೆಯಾಗಬೇಕು. ಹಾಗಿದ್ದರೂ ಪ್ರಸ್ತಾವಿತ ತ್ರಿವಳಿ ತಲಾಕ್‌ ಮಸೂದೆ ಒಂದೊಮ್ಮೆ ಕುರಾನ್‌ ಮತ್ತು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ಅದನ್ನು ಯಾವುದೇ ಮುಸ್ಲಿಂ ಮಹಿಳೆ ಸ್ವೀಕರಿಸುವುದಿಲ್ಲ” ಎಂದು ಆಲ್‌ ಇಂಡಿಯಾ ವಿಮೆನ್‌ ಪರ್ಸನಲ್‌ ಲಾ ಬೋರ್ಡ್‌ (ಎಐಎಂಡಬ್ಲ್ಯುಪಿಎಲ್‌ಬಿ) ಅಧ್ಯಕ್ಷೆ ಶಾಯಿಸ್ತಾ ಅಂಬರ್‌ ಹೇಳಿದ್ದಾರೆ.

“ಪ್ರಸ್ತಾವಿತ ಮಸೂದೆಯ ಕರಡನ್ನು ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ,ಎಐಎಂಡಬ್ಲ್ಯುಪಿಎಲ್‌ಬಿ, ಜಮಾತ್‌ ಇಸ್ಲಾಮಿ, ಜಮೀಯತ್‌ ಉಲ್‌ಮಾ ಎ ಹಿಂದ್‌ ಮತ್ತು ತಲಾಕ್‌ ನೀಡಲ್ಪಟ್ಟಿರುವ ಮುಸ್ಲಿಂ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ತೋರಿಸುವಂತೆ ನಾನು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದೇನೆ. ಅಗತ್ಯವೆಂದು ಕಂಡು ಬಂದರೆ ಆ ಬಗ್ಗೆ ನಿಮ್ಮೊಂದಿಗೆ ಚರ್ಚಿಸುತ್ತೇವೆ ಎಂಬ ಉತ್ತರ ನನಗೆ ಬಂದಿದೆ; ಆದರೆ ಈ ವರೆಗೂ ಅದು ನಡೆದಿಲ್ಲ” ಎಂದು ಶಾಯಿಸ್ತಾ ಅಂಬರ್‌ ಹೇಳಿದರು. 

“ಈ ಸ್ಥಿತಿಗೆ ಎಐಎಂಪಿಎಲ್‌ಬಿ ಕಾರಣ; ಯಾಕೆಂದರೆ ಅದು ಎಂದೂ ತ್ರಿವಳಿ ತಲಾಕ್‌ ಅನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೇ ಹೋಗಿಲ್ಲ; ಈಗಂತೂ ಅದು ತುಂಬಾ ತಡವಾಗಿದೆ’ ಎಂದು ಶಾಯಿಸ್ತಾ ಹೇಳಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ