ಹಜ್‌ ಯಾತ್ರಿಕರಿಗೆ ಅನುಕೂಲ

Team Udayavani, Apr 20, 2019, 6:00 AM IST

ಹೊಸದಿಲ್ಲಿ: ಇತ್ತೀಚೆಗಷ್ಟೇ ಹಜ್‌ ಯಾತ್ರೆಗೆ ಭಾರತೀಯರ ಕೋಟಾವನ್ನು 2 ಲಕ್ಷಕ್ಕೆ ಸೌದಿ ಅರೇಬಿಯಾ ಹೆಚ್ಚಿಸಿರುವುದರಿಂದಾಗಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ದೊಡ್ಡ ರಾಜ್ಯ ಗಳಿಂದ ಅರ್ಜಿ ಸಲ್ಲಿಸಿದ ಎಲ್ಲ ಯಾತ್ರಿಕರಿಗೂ ಅವಕಾಶ ಮಾಡಿಕೊಡಲಾಗಿದೆ. ಭಾರತೀಯರ ಕೋಟಾವನ್ನು 2 ಲಕ್ಷಕ್ಕೆ ಏರಿಸಿ ಶುಕ್ರವಾರ ಸೌದಿ ಅರೇಬಿಯಾ ಅಧಿಕೃತ ಆದೇಶ ಹೊರಡಿಸಿದೆ. ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭೇಟಿ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಸಬ್ಸಿಡಿ ಇಲ್ಲದೇ 2 ಲಕ್ಷ ಜನರು ಈ ಬಾರಿ ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ