
ಟ್ವೀಟ್ ಇಂಡಿಯಾ ಚಳವಳಿ
ವಿದೇಶಿ ಅಪಪ್ರಚಾರಕ್ಕೆ ಒಗ್ಗಟ್ಟಿನ ತಿರುಗೇಟು ಕೊಟ್ಟ ಭಾರತ
Team Udayavani, Feb 4, 2021, 7:20 AM IST

ಹೊಸದಿಲ್ಲಿ: ಭಾರತದ ಮೇಲೆ ಸುಳ್ಳು ಆರೋಪಗಳ ಗೂಬೆಕೂರಿಸುವ ಜಾಗತಿಕ ಶಕ್ತಿಗಳ ಸಂಚಿಗೆ ಇಡೀ ದೇಶ ಒಂದಾಗಿ “ಟ್ವೀಟ್ ಇಂಡಿಯಾ ಚಳವಳಿ’ ನಡೆಸಿ, ತಿರುಗೇಟು ಕೊಟ್ಟಿದೆ.
ಭಾರತೀಯರ ಟ್ವಿಟರ್ ಖಾತೆಗಳ ಬತ್ತಳಿಕೆಯಿಂದ ಚಿಮ್ಮಿಬಂದ ಇಂಡಿಯಾ ಟುಗೆದರ್, ಇಂಡಿಯಾ ಅಗೇನೆಸ್ಟ್ ಪ್ರೊಪಗಂಡಾ ಹ್ಯಾಶ್‌ಟ್ಯಾಗ್‌ಗಳು ಅಕ್ಷರಶಃ ವಿದೇಶಿ ಟೀಕಾಕಾರರಿಗೆ ಬುಧವಾರ ಬೆವರಿಳಿಸಿದೆ.
ರಿಹಾನ್ನಾ ಹಚ್ಚಿದ ಕಿಡಿ: ಅಲ್ಲೆಲ್ಲೋ ಅಮೆರಿಕದಿಂದ ಪಾಪ್ ತಾರೆ ರಿಹಾನ್ನಾ, ರೈತ ಪ್ರತಿಭಟನ ಸ್ಥಳದಲ್ಲಿನ ಇಂಟರ್ನೆಟ್ ಸ್ಥಗಿತ ಕುರಿತಾಗಿ “ನಾವೇಕೆ ಇದರ ಬಗ್ಗೆ ಮಾತಾಡುತ್ತಿಲ್ಲ?’ ಎಂದು ಟ್ವೀಟ್ ಮಾಡಿದ್ದಷ್ಟೇ. ಇದಕ್ಕೆ ಸ್ವೀಡನ್‌ನ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋದರ ಸಂಬಂಧಿ ಮೀನಾ ಹ್ಯಾರೀಸ್ ಕೂಡ ಧ್ವನಿಗೂಡಿಸಿ, ತಾವು ರೈತ ಪ್ರತಿಭಟನೆ ಪರ ಎಂದು ಘೋಷಿಸಿ, ಟ್ವಿಟರಿನಲ್ಲಿ ಕಿಡಿಹಚ್ಚಿದರು.
ಭಾರತ ಒಗ್ಗಟ್ಟಿನ ತಿರುಗೇಟು: ರಿಹಾನ್ನಾ ಟ್ವೀಟ್‌ಗೆ ವಿದೇಶಾಂಗ ಇಲಾಖೆ ಕಟುವಾಗಿ ರೀಟ್ವೀಟ್ ಮಾಡಿದ್ದೇ ತಡ ಇಡೀ ಭಾರತ ಒಗ್ಗಟ್ಟಾಗಿದೆ. ಸಚಿವರಲ್ಲದೆ ಸಿನೆಮಾ ನಟರು, ಕ್ರಿಕೆಟ್ ತಾರೆಗಳು “ಜಾಗತಿಕ ಪ್ರಚೋದನೆ’ ವಿರುದ್ಧ ಗುಡುಗಿದ್ದಾರೆ. “ಭಾರತವನ್ನು ದುರ್ಬಲಗೊಳಿಸಲು ಜಾಗತಿಕ ಶಕ್ತಿಗಳು ಪಿತೂರಿ ನಡೆಸುತ್ತಿವೆ. ಈ ಶಕ್ತಿಗಳನ್ನು ಭಾರತ ನಿಶ್ಚಿತವಾಗಿ ಮಣಿಸಲಿದೆ’ ಎಂದು ವಿದೇಶಾಂಗ ಇಲಾಖೆ ಟ್ವೀಟ್ ಮಾಡಿ, ಇಂಡಿಯಾ ಟುಗೆದರ್ ಹ್ಯಾಶ್‌ಟ್ಯಾಗ್ ಸೃಷ್ಟಿಸಿತ್ತು.
ಈ ಹ್ಯಾಶ್‌ಟ್ಯಾಗ್ ಅನುಸರಿಸಿ ಮೋದಿ ಸಚಿವ ಸಂಪುಟದ ಹಲವು ಸಚಿವರು ಟ್ವೀಟಿಸಿದ್ದಾರೆ. ಅಲ್ಲದೆ, ಬಿಜೆಪಿ ನಾಯಕರೂ “ಇಂಡಿಯಾ ಟುಗೆದರ್’ ಟ್ವೀಟಾಸ್ತ್ರ ಪ್ರಯೋಗಿಸಿ, ಕೃಷಿ ಕಾಯ್ದೆಗಳ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ವಿವಿಧ ರಂಗದ ತಾರೆಗಳೂ ಈ ಹ್ಯಾಶ್‌ಟ್ಯಾಗ್ ಬಳಸಿ, ರೈತ ಪ್ರತಿಭಟನೆ ವಿರುದ್ಧ ಭಾರತ ತೆಗೆದುಕೊಂಡ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಸ್ಟಾರ್ಗಳ ತಿರುಗೇಟು
ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ “ಭಾರತದ ಸಾರ್ವಭೌಮತ್ವ ಯಾವುದರೊಂದಿಗೂ ರಾಜಿಮಾಡಿಕೊಳ್ಳದು. ಬಾಹ್ಯಶಕ್ತಿಗಳು ಪ್ರೇಕ್ಷಕರಾಗಬಹುದಷ್ಟೇ, ಭಾಗೀದಾರರಾಗಬಾರದು. ಭಾರತಕ್ಕಾಗಿ ಏನು ನಿರ್ಧರಿಸಬೇಕೆನ್ನುವುದು ಭಾರತೀಯರಿಗೆ ಗೊತ್ತು. ರಾಷ್ಟ್ರವಾಗಿ ನಾವು ಒಗ್ಗಟ್ಟಾಗಿರೋಣ’.
ಅಕ್ಷಯ್ ಕುಮಾರ್, ಬಾಲಿವುಡ್ ನಟ “ರೈತರು ನಮ್ಮ ದೇಶದ ಅವಿಭಾಜ್ಯ ಅಂಗ. ಅವರ ಸಮಸ್ಯೆ ನಿವಾರಣೆಗೆ ಪ್ರಯತ್ನಗಳು ಸಾಗಿವೆ. ಭಿನ್ನಮತ ಸೃಷ್ಟಿಸುವವರತ್ತ ನೋಡುವ ಬದಲು, ಸೌಹಾರ್ದಯುತ ಕಾಯ್ದೆಗಳನ್ನು ಬೆಂಬಲಿಸೋಣ’.
ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗ: “ಭಾರತದ ಪರಿಸರ ವ್ಯವಸ್ಥೆಗೆ ರೈತರೇ ಬೆನ್ನೆಲುಬು. ಪ್ರತಿಭಟನೆ ವಿರುದ್ಧ ಕ್ರಮಗಳು ನಮ್ಮ ಆಂತರಿಕ ವಿಷಯ. ಮಾತುಕತೆಗಳ ಮೂಲಕ ನಾವು ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಜೈ ಹಿಂದ್!’.
ಅಮಿತ್ ಶಾ, ಗೃಹ ಸಚಿವ: ಯಾವ ಅಪಪ್ರಚಾರದಿಂದಲೂ ಭಾರತದ ಒಗ್ಗಟ್ಟನ್ನು ಹಿಮ್ಮೆಟ್ಟಿಸಲಾಗದು. ಯಾವ ಅಪಪ್ರಚಾರದಿಂದಲೂ ಭಾರತ ಏರುವ ಹೊಸ ಎತ್ತರವನ್ನು ತಡೆಯಲಾಗದು. ಭಾರತದ ಹಣೆಬರಹವನ್ನು ಅಭಿವೃದ್ಧಿ ನಿರ್ಧರಿಸುತ್ತದೆಯೇ ಹೊರತು, ಅಪಪ್ರಚಾರಗಳಲ್ಲ.
(ಬೆಂಬಲಿಸಿದ ಪ್ರಮುಖರು: ಪ್ರಗ್ಯಾನ್ ಓಝಾ (ಕ್ರಿಕೆಟಿಗ), ನಟರಾದ ಸುನಿಲ್ ಶೆಟ್ಟಿ, ಏಕ್ತಾ ಕಪೂರ್, ಅಜಯ್ ದೇವಗನ್, ಬಿಜೆಪಿಯ ಜೆ.ಪಿ. ನಡ್ಡಾ, ಸ್ಮತಿ ಇರಾನಿ, ಗೌತಮ್ ಗಂಭೀರ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್.)
ಎಚ್ಚರಿಕೆಗೆ ಬಗ್ಗಿದ ಟ್ವಿಟರ್
ರೈತ ಜನಾಂಗ ಹತ್ಯೆಗೆ ಮೋದಿ ಸಂಚು ರೂಪಿಸುತ್ತಿದ್ದಾರೆ- ಎಂಬ ಅರ್ಥದ ಹ್ಯಾಶ್‌ಟ್ಯಾಗ್ ವಿರುದ್ಧ ಟ್ವಿಟರ್ ಕ್ರಮ ಕೈಗೊಂಡಿದ್ದು, 250 ಖಾತೆಗಳನ್ನು ಬ್ಲಾಕ್ ಮಾಡಿದೆ. ರೈತ ಪ್ರತಿಭಟನೆಯನ್ನು ಬೆಂಬಲಿಸಿ, ಸರಕಾರದ ವಿರುದ್ಧ ನಕಲಿ ಸುದ್ದಿಗಳನ್ನು ಹಬ್ಬಿಸುತ್ತಿರುವ ಖಾತೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದ ಕೆಲವೇ ತಾಸುಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಸುಪ್ರೀಂ ತಿರಸ್ಕಾರ
ಹೊಸದಿಲ್ಲಿಯಲ್ಲಿ ಜ.26ರಂದು ನಡೆದ ಅಹಿತಕರ ಘಟನೆಗಳಿಗೆ ಕಾಲಮಿತಿಯ ತನಿಖೆ ನಡೆಸಬೇಕು ಎಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ ರೀತಿಯ ಆದೇಶ ನೀಡಲೂ ಮು.ನ್ಯಾ| ಎಸ್.ಎ.ಬೋಬೆx ನೇತೃತ್ವದ ನ್ಯಾಯಪೀಠ ನಿರಾಕರಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
