2021ರಲ್ಲಿ ಮತ್ತೆ ಬರಲಿದೆ ಟ್ವಿಟರ್ ಬ್ಲೂ ಟಿಕ್
Team Udayavani, Nov 26, 2020, 2:33 AM IST
ಹೊಸದಿಲ್ಲಿ: ಅಧಿಕೃತ ಸಕ್ರಿಯ ಖಾತೆದಾರರನ್ನು ಗುರುತಿಸಲು ತಾನು ಬಳಸುವ ನೀಲಿ ಟಿಕ್ ಪ್ರಕ್ರಿಯೆಗೆ 2021ರಿಂದ ಮರುಚಾಲನೆ ನೀಡಲು ಟ್ವಿಟರ್ ನಿರ್ಧರಿಸಿದೆ. ಮೂರು ವರ್ಷಗಳ ಹಿಂದೆ ಟ್ವಿಟರ್ ತನ್ನ ಪಬ್ಲಿಕ್ ವೆರಿಫಿಕೇಷನ್ ಯೋಜನೆಯನ್ನು ನಿಲ್ಲಿಸಿತ್ತು. ಬ್ಲೂ ಟಿಕ್ ನೀಡು ವ ಪ್ರಕ್ರಿಯೆಯ ವಿಚಾರದಲ್ಲಿ ಜನರಿಂದ ಗೊಂದಲ ಹಾಗೂ ಬ್ಲೂ ಟಿಕ್ ನೀಡುವಿಕೆಯಲ್ಲಿ ಪೂರ್ವಗ್ರಹ ತೋರಿಸುತ್ತಿದೆ ಎಂದು ಟೀಕೆ ವ್ಯಕ್ತವಾಗಿದ್ದ ಕಾರಣ ಅದು ಹಾಗೆ ಮಾಡಿತ್ತು.
ಈ ನಿಟ್ಟಿನಲ್ಲಿ ತಾನು ಹೊಸ ನೀತಿಯನ್ನು ರಚಿಸಿರುವುದಾಗಿ ಘೋಷಿಸಿರುವ ಟ್ವಿಟರ್ ಸಂಸ್ಥೆ ನವೆಂಬರ್ 24ರಿಂದ ಡಿಸೆಂಬರ್ 8ರವರೆಗೆ ತನ್ನ ನವ ನೀತಿಯ ಕುರಿತು ಅಭಿಪ್ರಾಯ ಹಂಚಿಕೊಳ್ಳುವಂತೆ ಬಳಕೆದಾರರಿಗೆ ವಿನಂತಿಸಿದೆ. ಯಾವ ಅಕೌಂಟ್ ವೆರಿಫೈ ಆಗುತ್ತದೆ, ವೆರಿಫಿಕೇಷನ್‌ಗೆ ಯಾರು ಅರ್ಹರು, ಹಾಗೂ ಯಾರ ಬ್ಲೂಟಿಕ್ ವೆರಿಫಿಕೇಷನ್ ಅನ್ನು ಅಳಸಿಹಾಕಲಾಗುತ್ತದೆ ಎನ್ನುವ ವಿವರ ಈ ನಿತಿಯಲ್ಲಿ ಇರಲಿದೆ.
ಸರ್ಕಾರಿ, ಕಂಪನಿಗಳು, ಬ್ರಾಂಡ್‌ಗಳು, ಕ್ರೀಡಾಪಟುಗಳು, ಸಿನೆಮಾ ನಟರು, ಸುದ್ದಿ ಮಾಧ್ಯಮಗಳ ಖಾತೆಗಳು ಹಾಗೂ ಇತರೆ ಪ್ರಭಾವಿ ಸಕ್ರಿಯ ವ್ಯಕ್ತಿಗಳ ಖಾತೆಗಳಿಗೆ ಈ ಹಿಂದೆ ಟ್ವಿಟರ್ ಬ್ಲೂ ಟಿಕ್ ಜಾರಿಗೊಳಿಸಿತ್ತು. ಇನ್ನು ಮುಂದೆ ಬ್ಲೂ ಟಿಕ್ ಪಡೆಯಲಿರುವ ಯಾವುದೇ ಖಾತೆ ಸಕ್ರಿಯವಾಗಿ ಇರದಿದ್ದರೆ ಅಥವಾ ಟ್ವಿಟರ್‌ನ ನಿಯಮಾವಳಿಗಳನ್ನು ಉಲ್ಲಂ ಸಿದರೆ, ಆ ಖಾತೆಯ ಬ್ಲೂ ಟಿಕ್ ರದ್ದುಗೊಳಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ
‘ಬಂಗಾಳದ ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ’ ಘೋಷಣೆ: ಕಳಂಕದಿಂದ ಪಾರಾಗಲು ಟಿಎಂಸಿ ಯತ್ನ
ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್ ನಿಧನ
ಪಿಎಮ್ಎವೈ-ಜಿ ಯೊಜನೆ ಅಡಿಯಲ್ಲಿ ಉ.ಪ್ರ 6.1 ಲಕ್ಷ ಫಲಾನುಭವಿಗಳಿಗೆ ಆರ್ಥಿಕ ನೆರವು
ಅಸ್ಸಾಂ ನಲ್ಲಿ ಹೆಪ್ಪುಗಟ್ಟಿದ ಕೊವಿಶೀಲ್ಡ್ ಲಸಿಕೆ