ಗಡಿಯಲ್ಲಿ ಐಇಡಿ ಸ್ಫೋಟ ; ಯೋಧರಿಬ್ಬರಿಗೆ ಗಂಭೀರ ಗಾಯ
Team Udayavani, May 5, 2019, 5:59 PM IST
ಶ್ರೀನಗರ: ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಖಾಂತಾವಾಲಾ ಪ್ರದೇಶದಲ್ಲಿ ಭಾನುವಾರ ಸಂಜೆ ಐಇಡಿ ಸ್ಫೋಟಗೊಂಡು ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಯೋಧರಿಬ್ಬರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ಜೊತೆಯಲ್ಲಿ ತೆರಳುತ್ತಿದ್ದಾಗ ಓರ್ವ ಯೋಧ ಐಇಡಿ ಮೇಲೆ ಕಾಲಿಟ್ಟಾಗ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.