ದತ್ತು ಕೊಟ್ಟರೂ ಆತ ಮೂರು ಮಕ್ಕಳ ತಂದೆ
Team Udayavani, Oct 26, 2018, 8:20 AM IST
ಹೊಸದಿಲ್ಲಿ: ಮೂರು ಮಕ್ಕಳಿರುವ ವ್ಯಕ್ತಿಗೆ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ಹಾಗೂ ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ಅಧಿಕಾರ ಹೊಂದುವುದರಿಂದ ನಿರ್ಬಂಧಿಸಲಾಗುವ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಜತೆಗೆ, ಮೂರು ಮಕ್ಕಳಲ್ಲಿ ಯಾವುದೇ ಒಂದು ಮಗುವನ್ನು ದತ್ತು ನೀಡಿದ್ದರೂ, ಆ ವ್ಯಕ್ತಿಯನ್ನು ಮೂರು ಮಕ್ಕಳ ತಂದೆ ಅಥವಾ ತಾಯಿಯೆಂದೇ ಪರಿಗಣಿಸಿ ಗ್ರಾಪಂ ಚುನಾವಣೆಯಿಂದ ಅಥವಾ ಅಧಿಕಾರದಿಂದ ನಿರ್ಬಂಧ ವಿಧಿಸಬಹುದು ಎಂಬ ಮಹತ್ವದ ಆದೇಶ ನೀಡಿದೆ.
2002ರಲ್ಲಿ ಒಡಿಶಾದ ನುವಾಪದ ಜಿಲ್ಲೆಯ ಗ್ರಾಮವೊಂದರ ಸರಪಂಚ್ ಆಗಿದ್ದ, ಮಿನಾಸಿಂಗ್ ಮಾಝಿ ಎಂಬಾತನ ಪತ್ನಿ ಅದೇ ವರ್ಷ ಆಗಸ್ಟ್ನಲ್ಲಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದಳು. ಹಾಗಾಗಿ, ಮಿನಾಸಿಂಗ್ ಮಾಝಿಯ ಸರಪಂಚ್ ಪಟ್ಟ ಕೈ ಜಾರಿತ್ತು. ಈ ಹಿನ್ನೆಲೆಯಲ್ಲಿ, ಕೋರ್ಟ್ ಮೆಟ್ಟಿಲೇರಿದ್ದ ಮಾಝಿ, ತನ್ನ ಮೊದಲ ಪುತ್ರನನ್ನು ತಾನು ದತ್ತು ನೀಡಿರುವುದರಿಂದ ತನ್ನನ್ನು 2 ಮಕ್ಕಳ ತಂದೆಯೆಂದೇ ಪರಿಗಣಿಸಬೇಕು ಎಂದು ಕೋರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್