Udayavni Special

ಕಣ್ಮರೆಯಾದ ಎರಡು ದಿನಗಳ ಬಳಿಕ ನಾಲ್ವರು ಮೀನುಗಾರರಿದ್ದ ದೋಣಿ ರಕ್ಷಣೆ

Team Udayavani, Nov 30, 2020, 6:20 AM IST

ಕಣ್ಮರೆಯಾದ ಎರಡು ದಿನಗಳ ಬಳಿಕ ನಾಲ್ವರು ಮೀನುಗಾರರಿದ್ದ ದೋಣಿ ರಕ್ಷಣೆ

ಮುಂಬಯಿ: ಕಣ್ಮರೆಯಾದ ಎರಡು ದಿನಗಳ ನಂತರ ನಾಲ್ಕು ಸಿಬ್ಬಂದಿಗಳನ್ನು ಒಳಗೊಂಡ ಮೀನುಗಾರಿಕಾ ದೋಣಿ ಪಾಲ್ಗರ್‌ ಜಿಲ್ಲೆಯ ಕರಾವಳಿಯಲ್ಲಿ ಪತ್ತೆಯಾಗಿದೆ.  26/11 ಭಯೋತ್ಪಾದಕರ ದಾಳಿಯ ಕರಾಳ ದಿನದಂದೆ ಈ ಘಟನೆ ನಡೆದಿದ್ದು, ಅಪಹರಣದ ಭೀತಿಯನ್ನು ಹುಟ್ಟುಹಾಕಿತ್ತು.

ಗುರುವಾರ ಬೆಳಗ್ಗೆ 6 ಗಂಟೆಗೆ ಪಾಲ್ಗರ್ ನ ಸತ್ಪತಿ ಗ್ರಾಮದಿಂದ ಹೊರಟ ಮೀನುಗಾರರರಾದ  ಜ್ಞಾನೇಶ್ವರ ತಾಂಡೆಲ್‌ (51), ದಿಲೀಪ್‌ ತಾಂಡೆಲ್‌ (55), ಜಗನ್ನಾಥ್‌ ತಾಂಡೆಲ್‌ (61) ಮತ್ತು ಪ್ರವೀಣ್‌ ಧನು (38) ನಾಪತ್ತೆಯಾಗಿದ್ದರು.

ಮಾಮೂಲಿಯಂತೆ ಮೀನುಗಾರರು ಸಂಜೆ 5ರ ಹೊತ್ತಿಗೆ ಹಿಂತಿರುಗುವ ನಿರೀಕ್ಷೆಯಿತ್ತು. ಆದರೆ ಅವರ ದೋಣಿ ರಾತ್ರಿಯಾದರೂ ಹಿಂದೆ ಬಂದಿರಲಿಲ್ಲ. ಶುಕ್ರವಾರ ಬೆಳಗ್ಗೆ ಕೂಡ ದೋಣಿಯ ಸುದ್ದಿ ಇಲ್ಲದ ಕಾರಣ ಗ್ರಾಮದ ಮೀನುಗಾರರ ಸಮಾಜವು ಸಭೆ ನಡೆಸಿತ್ತು.

ಜ್ಞಾನೇಶ್ವರ ತಾಂಡೆಲ್‌ ಅವರ ಪತ್ನಿ ಸುಜಾತಾ ಅವರು ಈ ಬಗ್ಗೆ ಸತ್ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೋಣಿಯಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯ ಟ್ರಾನ್ಸ್ಪಾಂಡರ್ ಮತ್ತು ಜಿಪಿಎಸ್‌  ಹೊಂದಿರದ ಕಾರಣ ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್‌  ಗಾರ್ಡ್‌ಗೆ ದೋಣಿಯನ್ನು ಹುಡುಕಲು ಕಷ್ಟಕರವಾಗಿತ್ತು.

12 ವರ್ಷಗಳ ಹಿಂದೆ, ಪಾಕಿಸ್ತಾನ ಭಯೋತ್ಪಾದಕರು ಮುಂಬಯಿಗೆ ಬಂದಾಗ ಭಾರತೀಯ ಮೀನುಗಾರಿಕಾ ದೋಣಿ ಅಪಹರಿಸಿದ ಘಟನೆ ಪುನರಾವರ್ತನೆಯ ಆತಂಕದಿಂದ ಜಿಲ್ಲಾ ಪೊಲೀಸರು ನೌಕಾಪಡೆ, ಕೋಸ್ಟ್‌  ಗಾರ್ಡ್‌, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಮುಂಬಯಿ ಪೊಲೀಸ್‌, ಮಹಾರಾಷ್ಟ್ರ ಕಡಲ ಮಂಡಳಿ, ಮೀನುಗಾರಿಕೆ ಇಲಾಖೆ ಮತ್ತು ಗುಜರಾತ್‌ ಸರಕಾರ  ಈ ಬಗ್ಗೆ ಪ್ರಮುಖ ಭಾಗಗಳಲ್ಲಿ ಎಚ್ಚರಿಕೆ ವಹಿಸಿತ್ತು.

ಈ ಮಧ್ಯೆ ಸ್ಥಳೀಯ ಮೀನುಗಾರ ಪ್ರದೀಪ್‌ ಪಾಟೀಲ್‌ ಎಂಬವರು ಗುರುವಾರ ಸಂಜೆ 5 ಗಂಟೆಗೆ ತಮ್ಮ ಸ್ವಂತ ದೋಣಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ನಾಪತ್ತೆಯಾದ ದೋಣಿಯನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದು ಬಳಿಕ ಕಾರ್ಯಾಚರಣೆಗಿಳಿದ ತಂಡವು ದೋಣಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ.  ಶನಿವಾರ 10 ಗಂಟೆಗೆ ಒಂಬತ್ತು ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿರುವ ದೋಣಿಯನ್ನು ಗುರುತಿಸಲಾಗಿದ್ದು, ಕಾಣೆಯಾದವರನ್ನು ಮರಳಿ ಮನೆಗೆ ಕರೆತರಲಾಗಿದೆ.

ತಾಂತ್ರಿಕ ದೋಷಣದಿಂದ ಮೀನುಗಾರರಿಗೆ ದಾರಿತಪ್ಪಿರುವುದಾಗಿ ತಿಳಿದು ಬಂದಿದೆ. ಕಾಣೆಯಾದ ಮೀನುಗಾರರು ಕೇವಲ ಒಂದು ದಿನ ಆಹಾರವನ್ನು ಮಾತ್ರ ಹೊಂದಿದ್ದು, ಆದರೆ ಅವರಿಗೆ ಕುಡಿಯಲು ಸಾಕಷ್ಟು ನೀರಿತ್ತು. ಮೀನುಗಾರರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kalburagi

ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲೇ ಧ್ವಜ ಹಾರಿಸಿದ ಪುಟ್ಟ ಮಕ್ಕಳು: ವಿಡಿಯೋ ವೈರಲ್

ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲೇ ಧ್ವಜ ಹಾರಿಸಿದ ಪುಟ್ಟ ಮಕ್ಕಳು: ವಿಡಿಯೋ ವೈರಲ್

FAU-G ‘Made in India’ Gaming App is Available Now: How to Download on Android

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಗೇಮ್ FAU-G ಲಭ್ಯ

ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ

ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ

ರೈತರೇ ಕೈ ಮುಗಿದು ಕೇಳುವೆ ಪ್ರತಿಭಟನೆ ಕೈಬಿಡಿ: ಡಿಸಿಎಂ ಗೋವಿಂದ ಕಾರಜೋಳ

ರೈತರೇ ಕೈ ಮುಗಿದು ಕೇಳುವೆ ಪ್ರತಿಭಟನೆ ಕೈಬಿಡಿ: ಡಿಸಿಎಂ ಗೋವಿಂದ ಕಾರಜೋಳ

ramesh

ಚಿಕ್ಕಮಗಳೂರು ರೆಸಾರ್ಟ್ ಭೇಟಿ ಮೊದಲೇ ನಿಗದಿಯಾಗಿತ್ತು: ರಮೇಶ್ ಜಾರಕಿಹೊಳಿ ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ

ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ

PM Narendra Modi wears special turban on Republic Day 2021, know who gifted this colouful ‘paghdi’ to him

ಗಣರಾಜ್ಯೋತ್ಸವದಲ್ಲಿ ಜಮ್ ನಗರದ “ಪಾಗ್ಡಿ”ಯಲ್ಲಿ ಕಂಗೊಳಿಸಿದ ಪ್ರಧಾನಿ

Farmers hold tractor march against farm laws, break Delhi Police barricade

ಬ್ಯಾರಿಕೇಡ್ ಮುರಿದವರು ನಾವಲ್ಲ : ಸಂಯುಕ್ತ ಕಿಸಾನ್ ಮೋರ್ಚಾ

ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್ Rally, ರೈತರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್ Rally, ರೈತರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

ಕೇಂದ್ರದ ನೂತನ ಮೂರು ಕೃಷಿ ಕಾಯ್ದೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲ್ಲ: ಸ್ಪೀಕರ್ ಪಟೋಲೆ

ಕೇಂದ್ರದ ನೂತನ ಮೂರು ಕೃಷಿ ಕಾಯ್ದೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲ್ಲ: ಸ್ಪೀಕರ್ ಪಟೋಲೆ

MUST WATCH

udayavani youtube

ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

ಹೊಸ ಸೇರ್ಪಡೆ

ಹೇಮಗಿರಿಯಲ್ಲಿ ಫೆ.10ರಂದು ದನಗಳ ಜಾತ್ರೆ : ಗ್ರಾಮಸ್ಥರು, ಕಂದಾಯ ಇಲಾಖೆ ನೌಕರರಿಂದ ಶ್ರಮದಾನi

ಹೇಮಗಿರಿಯಲ್ಲಿ ಫೆ.10ರಂದು ದನಗಳ ಜಾತ್ರೆ : ಗ್ರಾಮಸ್ಥರು, ಕಂದಾಯ ಇಲಾಖೆ ನೌಕರರಿಂದ ಶ್ರಮದಾನ

kalburagi

ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲೇ ಧ್ವಜ ಹಾರಿಸಿದ ಪುಟ್ಟ ಮಕ್ಕಳು: ವಿಡಿಯೋ ವೈರಲ್

ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲೇ ಧ್ವಜ ಹಾರಿಸಿದ ಪುಟ್ಟ ಮಕ್ಕಳು: ವಿಡಿಯೋ ವೈರಲ್

FAU-G ‘Made in India’ Gaming App is Available Now: How to Download on Android

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಗೇಮ್ FAU-G ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.