ಭಾರತೀಯ ಸೇನೆಗೆ ಹಾರ್ಡ್ವೇರ್ ಖರೀದಿ : 5,100 ಕೋಟಿ ರೂ. ಪ್ರಸ್ತಾವನೆಗೆ ಒಪ್ಪಿಗೆ
Team Udayavani, Jan 22, 2020, 7:41 AM IST
ಹೊಸದಿಲ್ಲಿ: ಸೇನೆಗೆ ಅಗತ್ಯವಾಗಿರುವ ಮಿಲಿಟರಿ ಹಾರ್ಡ್ ವೇರ್ ಮತ್ತು ಇತರ ಸಲಕರಣೆ ಖರೀದಿಗೆ 5,100 ಕೋಟಿ ರೂ. ಪ್ರಸ್ತಾವನೆಯನ್ನು ರಕ್ಷಣಾ ಖರೀದಿ ಸಮಿತಿ (ಡಿಎಸಿ) ಮಂಗಳವಾರ ಅನುಮೋದಿಸಿದೆ. ದೇಶಿಯವಾದ ಮೂಲ ಗಳಿಂದಲೇ ಅದನ್ನು ಖರೀದಿಸಲು ಸಮ್ಮತಿ ಸೂಚಿಸಿದ್ದು ಮಹತ್ವದ ಅಂಶ.
ಇದರ ಜತೆಗೆ ಭಾರತದ ನೌಕಾಪಡೆಗೆ ಅಗತ್ಯವಾಗಿರುವ ಸಬ್ಮರೀನ್ ನಿರ್ಮಾಣಕ್ಕೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮ್ಮತಿಸಲಾಗಿದೆ. ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಗೆ ಜ.ಬಿಪಿನ್ ರಾವತ್ ಅವರ ನೇಮಕ ನಡೆದ ಬಳಿಕದ ಮೊದಲ ಸಭೆ ಇದಾಗಿದೆ.
ಮತ್ತೂಂದು ಮಹತ್ವದ ನಿರ್ಧಾರದಲ್ಲಿ ಭಾರತದ ವ್ಯೂಹಾತ್ಮಕ ಪಾಲುದಾರರು ಮತ್ತು ಸಂಭಾವ್ಯ ಮೂಲ ಉತ್ಪನ್ನಗಳ ಉತ್ಪಾದಕರನ್ನು ನಿಗದಿ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ.