ಗಡಿಯಲ್ಲಿ ಪಾಕ್ ಗುಂಡಿನ ದಾಳಿ: ವೃದ್ಧೆಯ ಸಹಿತ ಇಬ್ಬರಿಗೆ ಗಾಯ
Team Udayavani, May 22, 2018, 12:03 PM IST
ಜಮ್ಮು : ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿನ ಭಾರತೀಯ ಸೇನಾ ಹೊರಠಾಣೆಗಳನ್ನು ಗುರಿ ಇರಿಸಿಕೊಂಡು ಪಾಕ್ ಸೈನಿಕರು ಇಂದು ನಸುಕಿನ ವೇಳೆ ನಡೆಸಿರುವ ಗುಂಡಿನ ದಾಳಿಯಲ್ಲಿ 70 ವರ್ಷ ಪ್ರಾಯದ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಪಾಕ್ ದಾಳಿಯಿಂದ ಭಯಭೀತರಾದ ಸ್ಥಳೀಯರು ಸರಕಾರದ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ಅಖನೂರ್ ನಿಂದ ಸಾಂಬಾ ವರೆಗಿನ ಎಲ್ಲ ಸೆಕ್ಟರ್ಗಳನ್ನು ಗುರಿ ಇರಿಸಿ ಪಾಕ್ ಸೈನಿಕರು ಗುಂಡಿನ ಹಾಗೂ ಶೆಲ್ ದಾಳಿಯನ್ನು ನಡೆಸಿದ್ದಾರೆ.
ಪಾಕ್ ದಾಳಿಗೆ ಭಾರತೀಯ ಸೈನಿಕರು ಅತ್ಯಂತ ಪರಿಣಾಮಕಾರಿ ಉತ್ತರವನ್ನು ನೀಡಿದ್ದಾರೆ; ಉಭಯ ಕಡೆಗಳಿಂದ ಗುಂಡಿನ ದಾಳಿ ಈಗಲೂ ಮುಂದುವರಿದಿದೆ ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.