ಬಾಲಿವುಡ್ ನಟಿ ಕಂಗನಾ ಟ್ವೀಟ್ ಗಳನ್ನು ಅಳಿಸಿಹಾಕಿದ ಟ್ವಿಟ್ಟರ್ !
Team Udayavani, Feb 4, 2021, 5:46 PM IST
ಮುಂಬೈ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ಪೋಸ್ಟ್ ಗಳನ್ನು ಟ್ವಿಟ್ಟರ್ ಅಳಿಸಿಹಾಕಿದೆ.
ಟ್ವಿಟ್ಟರ್ ನೀತಿಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕಂಗನಾ ರಣಾವುತ್ ಅವರು ಮಾಡಿದ್ದ ಎರಡು ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ವಕ್ತಾರರೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಅಂತರಾಷ್ಟ್ರೀಯ ಪಾಪ್ ಗಾಯಕಿ ರಿಹಾನ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಬೆನ್ನಲ್ಲೆ ಕಂಗಾನಾ ರಣಾವತ್ ಅವರನ್ನು ಜರೆದಿದ್ದರು. ಮಾತ್ರವಲ್ಲದೆ ನಟ-ಗಾಯಕರೊಬ್ಬರನ್ನು ಖಲಿಸ್ತಾನಿ ಎಂದು ಕರೆದಿದ್ದಲ್ಲದೆ, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾಧಕರು ಎಂದು ಟ್ವೀಟ್ ಮೂಲಕ ಹೇಳಿದ್ದರು.
ಇದನ್ನೂ ಓದಿ: ಫೆ.6ರ ರೈತ ಸಂಘಟನೆಯ ರಸ್ತೆ ಬಂದ್ ಪ್ರತಿಭಟನೆಗೆ ಬೆಂಬಲ ನೀಡಲ್ಲ: ಭಾರತೀಯ ಕಿಸಾನ್ ಸಂಘ
ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅವಹೇಳನ ಆರೋಪ: ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಈ ಕಾರಣಕ್ಕಾಗಿ ಹಲವಾರು ಟ್ವಿಟ್ಟರ್ ಬಳಕೆದಾರರು ಕಂಗನಾ ಅಕೌಂಟ್ ವಿರುದ್ಧ ರಿಪೋರ್ಟ್ ಮಾಡಿ, ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದರು. ಕಳೆದ ತಿಂಗಳು ಕೂಡ ಕಂಗನಾ ಅವರ ಟ್ವಿಟ್ಟರ್ ಅಕೌಂಟ್ ಕೆಲವು ಗಂಟೆಗಳ ಕಾಲ ನಿಷೇಧಕ್ಕೆ ಒಳಗಾಗಿದ್ದವು.