ಛತ್ತೀಸ್ಗಢ: ಮಾವೋ ಬಂಡುಕೋರರಿಂದ ಐಇಡಿ ಸ್ಫೋಟ; ಇಬ್ಬರು ಬಲಿ
Team Udayavani, Sep 17, 2018, 12:25 PM IST
ರಾಯಪುರ : ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋ ಬಂಡುಕೋರರು ಅವಿತಿಟ್ಟಿದ್ದ ಐಇಡಿ (ಸುಧಾರಿತ ಸ್ಫೋಟಕ) ಸ್ಫೋಟಗೊಂಡು ಮಹಿಳೆ ಸಹಿತ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ನಗರ ಹೊರವಲಯದಲ್ಲಿ ನಡೆದ ಈ ಘಟನೆಯಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಮೃತಪಟ್ಟರು ಎಂದು ಎಸ್ಪಿ ಅಭಿಷೇಕ್ ಮೀಣ ತಿಳಿಸಿದ್ದಾರೆ.
ಬಸ್ತಾರ್ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳನ್ನು ಗುರಿ ಇರಿಸಿ ಐಇಡಿ ಸ್ಫೋಟಕಗಳನ್ನು ಮಾವೋ ಬಂಡುಕೋರರು ಬಳಸುವುದು ಸಾಮಾನ್ಯವಾಗಿದೆ. ಮಾವೋಗಳ ಈ ಬಗೆಯ ಕೃತ್ಯಕ್ಕೆ ಹಲವಾರು ಪೊಲೀಸರು ಈ ವರೆಗೆ ಬಲಿಯಾಗಿದ್ದಾರೆ.