ಕೋಟ್ಯಧಿಪತಿಗಳಾದ ಕಾರ್ಮಿಕರು!

Team Udayavani, Dec 31, 2018, 12:30 AM IST

ಭೋಪಾಲ: ಮಧ್ಯ ಪ್ರದೇಶದ ಇಬ್ಬರು ಕಾರ್ಮಿಕರ ಹೊಸ ವರ್ಷದಲ್ಲಿ ಅದೃಷ್ಟ ಖುಲಾಯಿಸಿದೆ. ಪನ್ನಾ ವಜ್ರ ಗಣಿಯಲ್ಲಿ ಶೋಧ ನಡೆಸುತ್ತಿದ್ದ ಮೋತಿಲಾಲ್‌ ಹಾಗೂ ರಘುವೀರ್‌ ಪ್ರಜಾಪತಿಗೆ ಎರಡು ತಿಂಗಳ ಹಿಂದಷ್ಟೇ ಅತ್ಯಂತ ದೊಡ್ಡ ವಜ್ರದ ಹರಳು ಸಿಕ್ಕಿದೆ. ಇದನ್ನು 2.5 ಕೋಟಿ ರೂ.ಗೆ ಹರಾಜು ಹಾಕಲಾಗಿದೆ. ಈ ವಜ್ರ 42.9 ಕ್ಯಾರಟ್‌ ಇತ್ತು. ಶುಕ್ರವಾರ ನಡೆಸಿದ ಹರಾಜಿನಲ್ಲಿ ಪ್ರತಿ ಕ್ಯಾರಟ್‌ಗೆ 6 ಲಕ್ಷ ರೂ. ಮೌಲ್ಯ ಕಟ್ಟಲಾಗಿದೆ.

ಝಾನ್ಸಿ ಮೂಲದ ಆಭರಣಕಾರ ಮತ್ತು ಓರ್ವ ಬಿಎಸ್‌ಪಿ ನಾಯಕ ಈ ವಜ್ರವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ ಎಂದು ಪನ್ನಾದ ವಜ್ರ ಗಣಿಯ ಅಧಿಕಾರಿ ಸಂತೋಷ್‌ ಸಿಂಗ್‌ ಹೇಳಿದ್ದಾರೆ. ಈಗಾಗಲೇ ಕಾರ್ಮಿಕರಿಗೆ ಶೇ.20ರಷ್ಟು ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಹರಾಜು ಪಡೆದವರು ವಜ್ರವನ್ನು ಸ್ವಾಧೀನಪಡಿಸಿಕೊಂಡ ಅನಂತರ ಪಾವತಿ ಮಾಡುವರು. ತೆರಿಗೆ ಹಾಗೂ ಇತರ ಶುಲ್ಕಗಳನ್ನು ಕಳೆದು 2.30 ಕೋಟಿ ರೂ. ಇಬ್ಬರಿಗೆ ಸಿಗಲಿದೆ. ಮೋತಿಲಾಲ್‌ ಹಾಗೂ ರಘುವೀರ್‌ ಇದನ್ನು ಸಮಾನವಾಗಿ ಹಂಚಿಕೊಳ್ಳಲಿದ್ದು, ತಮ್ಮ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಾಲ ಮರು ಪಾವತಿಗೆ ವೆಚ್ಚ ಮಾಡಲಿದ್ದಾರೆ.

ಪನ್ನಾ ವಜ್ರದ ಗಣಿಯಲ್ಲಿ ಹಲವು ದಶಕಗಳಿಂದಲೂ ವಾಣಿಜ್ಯಿಕವಾಗಿ ವಜ್ರ ಉತ್ಖನನ ಮಾಡುತ್ತಿಲ್ಲ. ಆದರೆ ಇದು ಸಾರ್ವಜನಿಕರಿಗೆ ಮುಕ್ತ ವಾಗಿದ್ದು, ಯಾರು ಬೇಕಾ ದರೂ ಇಲ್ಲಿ ಅಗೆದು ವಜ್ರವನ್ನು ತೆಗೆಯಬಹುದು. ಆದರೆ ಇದನ್ನು ಪನ್ನಾ ವಜ್ರ ನಿರ್ವಹಣೆ ಇಲಾಖೆಗೆ ನೀಡಬೇಕಿರುತ್ತದೆ. ಹೀಗೆ ಸಿಕ್ಕ ವಜ್ರವನ್ನು ಇಲಾಖೆಯು ಹರಾಜು ಹಾಕುತ್ತದೆ. ಈ ಹಿಂದೆ 1961ರಲ್ಲಿ 44.55 ಕ್ಯಾರಟ್‌ ವಜ್ರ ಸಿಕ್ಕಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಸೇನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೇನಾಪಡೆ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಮಾತನಾಡಿದ್ದಾರೆ....

  • ಹೊಸದಿಲ್ಲಿ: ಪಾಕಿಸ್ಥಾನದಿಂದ ಗಡಿ ನುಸುಳಿ ಭಾರತಕ್ಕೆ ಪ್ರವೇಶಿಸಿರುವ ಉಗ್ರರನ್ನು ನಿರ್ಮೂಲಗೊಳಿಸಲು ಕಳೆದ ಎರಡು ವಾರಗಳಿಂದಲೂ ಸೇನಾ ಪಡೆ ಕಾಶ್ಮೀರದ ಗಂದರ್‌ಬಾಲ್‌...

  • ಥನೇಸರ್‌/ಮುಂಬಯಿ: "ಇತ್ತೀ ಚೆಗೆ ತಮಿಳು ನಾಡಿಗೆ ಭೇಟಿ ನೀಡಿದ್ದ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ತಾವು ದಂಗಲ್‌ ಸಿನಿಮಾ ವೀಕ್ಷಿಸಿರುವುದಾಗಿ ನನಗೆ ತಿಳಿಸಿದ್ದರು....

  • ಮುಂಬಯಿ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಆಪ್ತ ನಾಗಿದ್ದ ಗ್ಯಾಂಗ್‌ಸ್ಟರ್‌ ದಿ. ಇಕ್ಬಾಲ್‌ ಮಿರ್ಚಿಯೊಂದಿಗೆ ಹೊಂದಿದ್ದಾರೆ ಎನ್ನಲಾದ ವ್ಯವಹಾರಕ್ಕೆ ಸಂಬಂಧಿಸಿ...

  • ಆಹಾರ ಕೊರತೆ ಜಾಗತಿಕ ಸಮಸ್ಯೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಸಾಮಾಜಿಕ ಆರ್ಥಿಕ ಅಂಶಗಳು ಆಹಾರ ಅಲಭ್ಯತೆಗೆ...

ಹೊಸ ಸೇರ್ಪಡೆ

  • ಬೆಂಗಳೂರು: ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಗೆ 4 ಸಾವಿರ ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಅನುಮೋದನೆ...

  • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

  • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

  • ಹೊಸದಿಲ್ಲಿ: ಸೇನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೇನಾಪಡೆ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಮಾತನಾಡಿದ್ದಾರೆ....