ಮದುವೆ ಊಟ ಸೇವಿಸಿ ಇಬ್ಬರ ಸಾವು
Team Udayavani, Feb 19, 2020, 12:44 AM IST
ಮುಝಾಫರ್ನಗರ: ಉತ್ತರ ಪ್ರದೇಶದ ಮುಝಾಫರ್ನಗರದ ಗ್ರಾಮದಲ್ಲಿ ನಡೆದಿದ್ದ ಮದುವೆ ವೇಳೆ ಊಟ ಸ್ವೀಕರಿಸಿದ ಬಳಿಕ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ.
ಈ ಘಟನೆಯಲ್ಲಿ ಇಬ್ಬರು ಅಸುನೀಗಿದ್ದಾರೆ. ಇತರ ಆರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.