ಜಮ್ಮು ಕಾಶ್ಮೀರ : ಶೋಪಿಯಾನ್ನಲ್ಲಿ ಸೇನೆಯಿಂದ ಶೂಟೌಟ್, ಇಬ್ಬರ ಸಾವು
Team Udayavani, Jun 3, 2019, 10:58 AM IST
ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನೆ ಇಂದು ಸೋಮವಾರ ನಡೆಸಿದ ಶೂಟೌಟ್ ನಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟರು.
ಸೇನೆ ಇಂದು ನಸುಕಿನ ವೇಳೆ ಮೂಲೂ ಚಿತ್ರಗಾಂವ್ ಎಂಬಲ್ಲಿ ಚೆಕ್ ಪೋಸ್ಟ್ ಹಾಕಿತ್ತು. ಆ ವೇಳೆಗೆ ಧಾವಿಸಿ ಬಂದ ವಾಹನವೊಂದು ಚೆಕ್ ಪೋಸ್ಟ್ ದಾಟಿ ಮುನ್ನುಗ್ಗಲು ಯತ್ನಿಸಿತು.
ವಾಹನದ ಒಳಗಿದ್ದ ಉಗ್ರರು ಸೇನೆಯ ಮೇಲೆ ಗುಂಡೆಸೆಯಲು ತೊಡಗಿದರು. ಕೂಡಲೇ ಭದ್ರತಾ ಪಡೆಗಳು ಶೂಟೌಟ್ ನಡೆಸಿದರು. ಪರಿಣಾಮವಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದೇಹಗಳನ್ನು ಜಿಲ್ಲಾ ಪೊಲೀಸ್ ಲೈನ್ಸ್ ಗೆ ಒಯ್ಯಲಾಗಿದ್ದು ಅಲ್ಲಿ ಶವಗಳ ಗುರುತು ಹಚ್ಚುವ ಕೆಲಸ ನಡೆಯಲಿದೆ.
ಈ ಶೂಟೌಟ್ಬಗ್ಗೆ ಪ್ರತಿಕ್ರಿಯೆಗಾಗಿ ಸೇನೆಯ ಅಧಿಕಾರಿಗಳಾಗಲೀ ರಕ್ಷಣಾ ವಕ್ತಾರರಾಗಲೀ ತತ್ಕ್ಷಣ ಸಂಪರ್ಕಕ್ಕೆ ಸಿಗಲಿಲ್ಲ.