ಜಮ್ಮು ಕಾಶ್ಮೀರ ಎಲ್ಓಸಿಯಲ್ಲಿ ಪಾಕ್ ಫೈರಿಂಗ್ : ಇಬ್ಬರು ಭಾರತೀಯ ಸೈನಿಕರಿಗೆ ಗಾಯ
Team Udayavani, Jul 6, 2019, 12:09 PM IST
ಜಮ್ಮು : ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಸೈನಿಕರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೌಶೇರಾ ಸೆಕ್ಟರ್ನ ರೊಮಾಲಿ ಧಾರಾ ಪ್ರದೇಶದಲ್ಲಿ ಮುಂಚೂಣಿ ಠಾಣೆಯ ಕಾವಲು ಕರ್ತವ್ಯ ನಿರತರಾಗಿದ್ದ ಸೈನಿಕರು ಶುಕ್ರವಾರ ರಾತ್ರಿ ಪಾಕ್ ಪಡೆಗಳ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಾಯಗೊಂಡರು.
ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಪಾಕ್ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಗುಂಡಿನ ದಾಳಿ ನಡೆಸಿ ಬಳಿಕ ದೊಡ್ಡ ಮಟ್ಟದಲ್ಲಿ ಮೋರ್ಟಾರ್ ಶೆಲ್ಲಿಂಗ್ ದಾಳಿ ನಡೆಸಿದರು. ಆಗ ಭಾರತೀಯ ಸೈನಿಕರಿಬ್ಬರು ಗಾಯಗೊಂಡರು ಎಂದು ಸೇನಾ ವಕ್ತಾರ ತಿಳಿಸಿದರು.
ಘಟನೆಯನ್ನು ಅನುಸರಿಸಿ ಭಾರತೀಯ ಪಡೆಗಳು ಕೂಡಲೇ ಗುಂಡಿನ ಸಕತ್ ಪ್ರತ್ಯುತ್ತರ ನೀಡಿ ಪಾಕ್ ಗುಂಡಿನ ಸದ್ದನ್ನು ಅಡಗಿಸಿದವು.
ಶುಕ್ರವಾರ ರಾತ್ರಿ 10.30ರ ವರೆಗೂ ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿತ್ತು ಎಂದು ಸೇನಾ ವಕ್ತಾರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ