ಜನಜಂಗುಳಿ ಪ್ರದೇಶದಲ್ಲಿ ಎರಡು ಗ್ಯಾಂಗ್ ಸ್ಟರ್ ತಂಡಗಳ ಶೂಟೌಟ್; ಇಬ್ಬರು ಬಲಿ

Team Udayavani, May 20, 2019, 10:08 AM IST

ನವದೆಹಲಿ:ಎರಡು ವಿರೋಧಿ ರೌಡಿ ಗ್ಯಾಂಗ್ ಗಳ ನಡುವೆ ನಡೆದ ಶೂಟೌಟ್ ನಲ್ಲಿ ಇಬ್ಬರು ಶಂಕಿತ ಕ್ರಿಮಿನಲ್ ಗಳು ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾ ಮೊರ್ ಮೆಟ್ರೋ ಸ್ಟೇಶನ್ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ, ದರೋಡೆ, ಹಣ ಸುಲಿಗೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದ್ದ ಗ್ಯಾಂಗ್ ಸ್ಟರ್, ನವಾಡಾ ಪ್ರದೇಶದ ನಿವಾಸಿ ಪ್ರವೀಣ್ ಗೆಹ್ಲೋಟ್ ಮತ್ತು ವಿಕಾಸ್ ದಲಾಲ್ ಶೂಟೌಟ್ ನಲ್ಲಿ ಬಲಿಯಾಗಿರುವುದಾಗಿ ವಿವರಿಸಿದ್ದಾರೆ.

ನಿವೇಶನದ ವಿಚಾರದಲ್ಲಿ ಎರಡೂ ಗ್ಯಾಂಗ್ ಗಳ ನಡುವೆ ಶೂಟೌಟ್ ನಡೆಯಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಪ್ಪು ಕಾರಿನಲ್ಲಿದ್ದ ಗ್ಯಾಂಗ್ ನವರು ಬಿಳಿ ಕಾರಿನೊಳಗಿದ್ದವರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಜನನಿಬಿಢ ಪ್ರದೇಶದಲ್ಲಿ ಈ ಶೂಟೌಟ್ ನಡೆದಿದ್ದರಿಂದ ಜನಸಾಮಾನ್ಯರು ಗಾಬರಿ, ಆತಂಕಕ್ಕೊಳಗುವಂತಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಿಸಿಆರ್ ಮೆಟ್ರೋ ಸ್ಟೇಶನ್ ಸಮೀಪ ಇದ್ದ ಪೊಲೀಸ್ ಅಧಿಕಾರಿಗಳು ಕೂಡಾ ಕ್ರಿಮಿನಲ್ಸ್ ಗಳ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಕ್ರಿಮಿನಲ್ ಸಾವನ್ನಪ್ಪಿರುವುದಾಗಿ ಹೇಳಿದರು. ಶೂಟೌಟ್ ನಲ್ಲಿ ಶಾಮೀಲಾಗಿದ್ದ ಮತ್ತಿಬ್ಬರು ಗ್ಯಾಂಗ್ ಸ್ಟರ್ ಗಳು ಪರಾರಿಯಾಗಿದ್ದಾರೆ. ಅವರನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ