Udayavni Special

ದೀಪಾವಳಿ ಬಳಿಕ ದ್ವಿಚಕ್ರ ವಾಹನಗಳ ಬೆಲೆ ಏರಿಕೆ

ಬಿಎಸ್‌6ನಲ್ಲಿ ಮಾಲಿನ್ಯ ಕಡಿಮೆ

Team Udayavani, Oct 24, 2019, 4:02 AM IST

q-29

ಸಾಂದರ್ಭಿಕ ಚಿತ್ರ

ಸದ್ಯದ ಮಾರುಕಟ್ಟೆಯಲ್ಲಿರುವ ಬಿಎಸ್‌4 (ಭಾರತ್‌ ಸ್ಟೇಜ್‌4) ವಾಹನಗಳು ಈ ಹಣಕಾಸು ವರ್ಷದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಎಪ್ರಿಲ್‌ 1ರಿಂದ ಬಿಎಸ್‌ 6 ಮಾದರಿ ವಾಹನಗಳು ಮಾರು ಕಟ್ಟೆಗೆ ಬರಲಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೆಲವು ಬಿಎಸ್‌6 ಮಾದರಿಯ ದ್ವಿಚಕ್ರ ವಾಹನಗಳಿದ್ದು, ಅವುಗಳ ದರ ದೀಪಾವಳಿ ಬಳಿಕ ಏರಿಕೆಯಾಗಲಿದೆ.

ಏನಿದು ಬಿಎಸ್‌ 6
2000ನೇ ಇಸವಿಯಲ್ಲಿ ಬಿಎಸ್‌ ಮಾಲಿನ್ಯ ನಿಯಮ ಪರಿಚಯಿಸಲಾಯಿತು. 2010ರಲ್ಲಿ ಬಿಎಸ್‌ 3 ವಾಹನಗಳು ಮಾರುಕಟ್ಟೆಗೆ ಬಂದವು. ಬಿಎಸ್‌ 4 ಮಾದರಿಯ ವಾಹನಗಳ ಮುಂದಿನ ಅವತರಣಿಕೆಯೇ ಬಿಎಸ್‌ 6. ಪರಿಸರ ಸ್ನೇಹಿ ಎಂಜಿನ್‌ಗಳನ್ನು ಈ ವಾಹನಗಳು ಹೊಂದಿ ರಲಿವೆ. ಬಿಎಸ್‌3, ಬಿಎಸ್‌4 ಬಳಿಕ ಬಿಎಸ್‌6 ಮುಂದಿನ ವರ್ಷ ಜಾರಿಗೆ ಬರಲಿದೆ.

ದ್ವಿ ಚಕ್ರ ಮಾತ್ರ
ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಎಸ್‌6 ದ್ವಿಚಕ್ರ ವಾಹನಗಳು ಮಾತ್ರ ಇವೆ. ಕಾರು, ಅಟೋ ರಿಕ್ಷಾ ಮತ್ತು ಕಮರ್ಶಿಯಲ್‌ ವಾಹನಗಳು ಮಾರ್ಚ್‌ ತಿಂಗಳ ಬಳಿಕ ಮಾರುಕಟ್ಟೆಗೆ ಬರಲಿವೆ. ಇನ್ನು ಕೆಲವು ಐಷಾರಾಮಿ ವಿದೇಶಿ ಕಾರುಗಳು ಈಗಾಗಲೇ ಲಭ್ಯ ಇವೆ.

ಶೇ. 10-15 ಏರಿಕೆ
ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್‌6 ಮಾದರಿಯ ದ್ವಿ ಚಕ್ರ ವಾಹನಗಳು ಸಾಮಾನ್ಯ ದರಕ್ಕೆ ಮಾರಾಟವಾಗುತ್ತಿವೆೆ. ಆದರೆ ಈ ತಿಂಗಳಾಂತ್ಯದಲ್ಲಿ ಬರುವ ದೀಪಾವಳಿ ಬಳಿಕ ಅವುಗಳ ದರ ಶೇ. 10ರಿಂದ 15 ಹೆಚ್ಚಾಗಲಿದೆ.

4,000 ರೂ.
ದೀಪಾವಳಿ ಬಳಿಕ ಕನಿಷ್ಠ 4 ಸಾವಿರ ರೂ.ಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದಾ: 100 ಸಿಸಿ ಸಾಮರ್ಥ್ಯದ ಬೈಕ್‌ನ ಎಕ್ಸ್‌ ಶೋರೂಂ ದರ 40,000 ರೂ. ಇದ್ದರೆ ಅವುಗಳಿಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಹೆಚ್ಚಾಗಲಿದೆ. 1 ಲಕ್ಷಗಳ ಬೈಕ್‌ನ ದರ 10 ಸಾವಿರ ದಿಂದ 15 ಸಾವಿರ ರೂ. ಹೆಚ್ಚಾಗುವ ಸಾಧ್ಯತೆ ಇದೆ.

ಬಿಎಸ್‌ 4 ಗಡುವು
ಈಗ ಮಾರುಕಟ್ಟೆಯಲ್ಲಿರುವ ಬಿಎಸ್‌4 ಮಾದರಿಯ ವಾಹನಗಳನ್ನು 2020ರ ಮಾರ್ಚ್‌ ಒಳಗೆ ಮಾರಾಟ ಮಾಡಬೇಕಾಗಿದೆ. ಎಪ್ರಿಲ್‌ 1ರ ಬಳಿಕ ಮಾರಾಟಗೊಳ್ಳುವ ಎಲ್ಲ ವಾಹನಗಳು ಬಿಎಸ್‌6 ಮಾದರಿ ಎಂಜಿನ್‌ ಹೊಂದಿರಬೇಕು.

ಜಿಎಸ್‌ಟಿ ಕಡಿಮೆಯಾದರೆ…
ಈಗಿನ ಆಟೋ ಮಾರುಕಟ್ಟೆಯ ಹಿನ್ನಡೆಗೆ ಜಿಎಸ್‌ಟಿ ಹೆಚ್ಚಿರುವುದು ಒಂದು ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಳಿಕೆ ಯಾದರೆ ಬಿಎಸ್‌6 ವಾಹನಗಳ ದರದಲ್ಲಿ ಇಳಿಕೆ ಕಾಣಬಹುದು.

ಹೋಂಡಾ ಪ್ರಥಮ
ದೇಶದಲ್ಲಿ ಮೊದಲ ಬಿಎಸ್‌6 ದ್ವಿ ಚಕ್ರ ವಾಹನವನ್ನು ಹೋಂಡಾ ಸಂಸ್ಥೆ ಪರಿಚಯಿಸಿದೆ. ಸೆಪ್ಟಂಬರ್‌ನಲ್ಲಿ ಆ್ಯಕ್ಟಿವಾ 125 ಸ್ಕೂಟರ್‌ ಮಾರು ಕಟ್ಟೆಗೆ ಬಂದಿದ್ದು ಒಳ್ಳೆಯ ಬೇಡಿಕೆ ಇದೆ. ಇದರ ದರ ಬಿಎಸ್‌4ರ ಇದೇ ಮಾಡೆಲ್‌ಗೆ ಹೋಲಿಸಿದರೆ ಶೇ. 10-15 ಹೆಚ್ಚು.

ಟಿವಿಎಸ್‌
ಟಿವಿಎಸ್‌ ಸಂಸ್ಥೆ ಈಗಾಗಲೇ ತನ್ನ 19 ಮಾದರಿಯ ವಾಹನಗಳ ಉತ್ಪ ನ್ನವನ್ನು ಆರಂಭಿಸಿದ್ದು, ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.

ಹೀರೋ
ಹೀರೋ ಈಗಾಗಲೇ ತನ್ನ ಸ್ಪೆಂಡರ್‌ ಐಸ್ಮಾರ್ಟ್‌ 110 ಸಿಸಿ ಬೈಕ್‌ ಅನ್ನು ತಯಾರಿಸಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ.

ದರ ಹೆಚ್ಚಳ ಏಕೆ?
ಈಗಾಗಲೇ ಆರ್ಥಿಕ ಸಂಕಷ್ಟ ದಿಂದ ಅಟೋಮೊಬೈಲ್‌ ವಲಯ ತತ್ತರಿಸಿದೆ. ಬಿಎಸ್‌ 4 ಮಾದರಿಯ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಪಾರಗೊಳ್ಳದೇ ಉಳಿದಿದ್ದು, ಅವನ್ನು ಬಿಎಸ್‌6 ಮಾದರಿಗೆ ಬದಲಾಯಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಗ್ರಾಹಕನ ಮೇಲೆ ಸಂಸ್ಥೆಗಳು ಹಾಕಬೇಕಾಗಿದೆ. ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ವಾಹನಗಳನ್ನು ಬದಲಾಯಿಸುವುದು ಕಷ್ಟವಾದ ಕಾರಣ ದರ ದುಬಾರಿಯಾಗಲಿದೆ.

ಬಿಎಸ್‌6ರಲ್ಲಿ ಬಿಎಸ್‌4 ವಾಹನಕ್ಕೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ಕಡಿಮೆ. ಪೆಟ್ರೋಲ್‌ ವಾಹನಗಳಲ್ಲಿ ಶೇ. 25 ಮತ್ತು ಡೀಸಿಲ್‌ ವಾಹನಗಳಲ್ಲಿ ಶೇ. 75 ಮಾಲಿನ್ಯ ಕಡಿಮೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ವಿದ್ಯುತ್‌ ಬೇಡಿಕೆ ಕುಸಿತ; ಮೊದಲ ಬಾರಿ ಆರ್‌ಟಿಪಿಎಸ್‌ ಬಂದ್‌!

ವಿದ್ಯುತ್‌ ಬೇಡಿಕೆ ಕುಸಿತ; ಮೊದಲ ಬಾರಿ ಆರ್‌ಟಿಪಿಎಸ್‌ ಬಂದ್ ‌!

ತಾಯಿಯಿಂದ ನನಗೆ ಹೋರಾಟ ಗುಣ: ಕಮಲಾ ಹ್ಯಾರಿಸ್‌

ತಾಯಿಯಿಂದ ನನಗೆ ಹೋರಾಟ ಗುಣ: ಕಮಲಾ ಹ್ಯಾರಿಸ್‌
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು; ಉತ್ತರ ಪ್ರದೇಶ ಸರಕಾರ ನಿರ್ಧಾರ

ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು; ಉತ್ತರ ಪ್ರದೇಶ ಸರಕಾರ ನಿರ್ಧಾರ

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಕೈಸೇರಲಿದೆ ಇ-ಪಾಸ್‌ಪೋರ್ಟ್‌

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

Vaccine

ಕೇಂದ್ರದ ಮೂಲಕವೇ ಲಸಿಕೆ ಸಂಗ್ರಹ, ಪೂರೈಕೆ

ಸ್ವದೇಶಿ ಎಂದರೆ ಎಲ್ಲ ವಿದೇಶಿ ಉತ್ಪನ್ನಗಳ ಬಹಿಷ್ಕಾರವಲ್ಲ; ಭಾಗವತ್‌ ಸ್ಪಷ್ಟನೆ

ಸ್ವದೇಶಿ ಎಂದರೆ ಎಲ್ಲ ವಿದೇಶಿ ಉತ್ಪನ್ನಗಳ ಬಹಿಷ್ಕಾರವಲ್ಲ; ಭಾಗವತ್‌ ಸ್ಪಷ್ಟನೆ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು; ಉತ್ತರ ಪ್ರದೇಶ ಸರಕಾರ ನಿರ್ಧಾರ

ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರು; ಉತ್ತರ ಪ್ರದೇಶ ಸರಕಾರ ನಿರ್ಧಾರ

6,956 ಅನರ್ಹ ಪಡಿತರ ಚೀಟಿ ಪತ್ತೆ

6,956 ಅನರ್ಹ ಪಡಿತರ ಚೀಟಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.