ಉಗ್ರ ಘೋಷಣೆಗೆ ಲೋಕ ಅಸ್ತು

ವಿಪಕ್ಷದ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಅನುಮೋದನೆ

Team Udayavani, Jul 25, 2019, 5:03 AM IST

q-40

ನವದೆಹಲಿ: ಸಂಘಟನೆಯ ಜೊತೆಗೆ ವ್ಯಕ್ತಿಯನ್ನೂ ‘ಉಗ್ರ’ ಎಂದು ಘೋಷಿಸಲು ಅನುವು ಮಾಡುವ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ತಿದ್ದುಪಡಿಗೆ ಲೋಕಸಭೆಯಲ್ಲಿ ಬುಧವಾರ ಅನುಮೋದನೆ ನೀಡಲಾಗಿದೆ. ವಿಪಕ್ಷಗಳ ವಿರೋಧ ಹಾಗೂ ಸಭಾತ್ಯಾಗದ ಮಧ್ಯೆಯೇ ಧ್ವನಿಮತದಿಂದ ಅನುಮೋದನೆ ಲಭ್ಯವಾಗಿದೆ.

ಮಸೂದೆ ಮಂಡನೆಯ ಚರ್ಚೆ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ‘ಇದೇ ರೀತಿಯ ಕಾನೂನು ಅಮೆರಿಕ, ವಿಶ್ವಸಂಸ್ಥೆ, ಚೀನಾ, ಪಾಕಿಸ್ತಾನ, ಇಸ್ರೇಲ್ ಹಾಗೂ ಐರೋಪ್ಯ ಒಕ್ಕೂಟದಲ್ಲಿವೆ. ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಅಗತ್ಯವಿದೆ. ನಗರ ನಕ್ಸಲರು ಹಾಗೂ ಉಗ್ರರ ಪರ ಒಲವು ಹೊಂದಿರುವವರಿಗೆ ಸರ್ಕಾರ ಯಾವುದೇ ಅನುಕಂಪ ತೋರುವುದಿಲ್ಲ. ನಮ್ಮ ದೇಶದಲ್ಲಿ, ಸಾಮಾಜಿಕ ಕಾರ್ಯದಲ್ಲಿ ತುಂಬಾ ಜನ ಗೌರವಯುತವಾಗಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಬಂಧಿಸುವ ಅಗತ್ಯ ಪೊಲೀಸರಿಗೆ ಇಲ್ಲ. ಆದರೆ ನಗರ ನಕ್ಸಲರ ಬಗ್ಗೆ ನಾವು ಯಾವುದೇ ಅನುಕಂಪ ಹೊಂದಿಲ್ಲ’ ಎಂದಿದ್ದಾರೆ.

ಇದೇ ಮಸೂದೆಯನ್ನು ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೂಪಿಸಿತ್ತು. ಆದರೆ ನಾವು ಮಂಡಿಸಿದ್ದಕ್ಕೆ ಕಾಂಗ್ರೆಸ್‌ ವಿರೋಧಿಸುತ್ತಿದೆ. ನೀವು ಮಾಡಿದ್ದಾಗ ಸರಿ, ನಾವು ಮಾಡಿದ್ದಾಗ ತಪ್ಪೇ ಎಂದು ಪ್ರಶ್ನಿಸಿದ್ದಾರೆ.

ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತು. ಆದರೆ ಆಡಳಿತ ಪಕ್ಷ ಇದಕ್ಕೆ ಒಪ್ಪದೇ ಇದ್ದಾಗ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಲು ನಿರ್ಧರಿಸ ಲಾಯಿತು. ಆಗ ಕಾಂಗ್ರೆಸ್‌ ಸಭಾತ್ಯಾಗ ನಡೆಸಿತು. ಮಸೂದೆ ರಾಜ್ಯಸಭೆಯಲ್ಲಿ ಇನ್ನಷ್ಟೇ ಅನುಮೋದನೆ ಪಡೆಯಬೇಕಿದೆ.

ಮತ ವಿಭಜನೆಗೆ ಒವೈಸಿ ಪಟ್ಟು: ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ ನಂತರವೂ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಮತ ವಿಭಜನೆಗೆ ಆಗ್ರಹಿಸಿದರು. ಆದರೆ ಇದಕ್ಕೆ ಆಡಳಿತ ಪಕ್ಷ ವಿರೋಧಿಸಿತು. ಒಬ್ಬ ಸಂಸದ ಮತ ವಿಭಜನೆಗೆ ಆಗ್ರಹಿಸುವುದು ಸರಿಯಲ್ಲ. ಇದಕ್ಕೆ ನಿಯಮಾವಳಿಯಲ್ಲಿ ತಿದ್ದುಪಡಿ ತರಬೇಕು ಎಂದೂ ಆಗ್ರಹಿಸಲಾಯಿತು. ಸುಮಾರು ಅರ್ಧ ಗಂಟೆ ಕಾಲ ಭಾರಿ ಚರ್ಚೆ ನಡೆದು, ಕೊನೆಗೂ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಪರ ಹಾಗೂ ವಿರೋಧವಾಗಿರುವವರು ಎದ್ದು ನಿಂತರು. ಅವರ ಸಂಖ್ಯೆಯನ್ನು ಲೆಕ್ಕ ಹಾಕಲಾಯಿತು. 287 ಮತಗಳು ಮಸೂದೆ ಪರ ಹಾಗೂ ಎಂಟು ಮತಗಳು ವಿರುದ್ಧವಾಗಿ ಚಲಾವಣೆಯಾದವು. ಈ ವೇಳೆ ಇಡೀ ಸರ್ಕಾರವನ್ನು ನಾನು ಎದ್ದು ನಿಲ್ಲಿಸಿದೆ ಎಂದು ಒವೈಸಿ ಹೇಳಿದ್ದಕ್ಕೆ, ನಾವು ಉಗ್ರವಾದದ ವಿರುದ್ಧ ಎದ್ದು ನಿಂತಿದ್ದೇವೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದರು.

ಆರ್‌ಟಿಐ ವಿಧೇಯಕ ಸ್ಥಾಯಿ ಸಮಿತಿಗೆ ಒಪ್ಪಿಸಿ

ಮಾಹಿತಿ ಹಕ್ಕು ತಿದ್ದುಪಡಿ ವಿಧೇಯಕವನ್ನು ಸಂಸತ್‌ನ ಸ್ಥಾಯಿ ಸಮಿತಿಗೆ ಒಪ್ಪಿಸಿ, ಪರಿಶೀಲನೆ ನಡೆಸಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಒತ್ತಾಯಿಸಿದೆ. ಈ ವಿಧೇಯಕದಲ್ಲಿ ರಾಜ್ಯಗಳ ಹಕ್ಕುಗಳನ್ನು ಹತ್ತಿಕ್ಕಲಾಗಿದೆ, ಮಾಹಿತಿ ಆಯೋಗದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಹೀಗಾಗಿ ಇದನ್ನು ಅಂಗೀಕರಿಸುವ ಮುನ್ನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ಗುಲಾಂ ನಬಿ ಆಜಾದ್‌ ಆಗ್ರಹಿಸಿದರು. ಇದೇ ವೇಳೆ, ಆರ್‌ಟಿಐ ಮಾತ್ರವಲ್ಲದೆ, ತ್ರಿವಳಿ ತಲಾಖ್‌, ಕಾರ್ಮಿಕ ಸುಧಾರಣೆ, ಕಾನೂನುಬಾಹಿರ ಚಟುವಟಿಕೆ ವಿಧೇಯಕ ಸೇರಿದಂತೆ 7 ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಟಿಎಂಸಿ ಆಗ್ರಹಿಸಿದೆ.

ತೀರ್ಪಿನ ಭಾಷಾಂತರ

ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಕನ್ನಡ ಸೇರಿದಂತೆ 9 ಭಾಷೆಗಳಿಗೆ ಭಾಷಾಂತರ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಸಚಿವ ರವಿಶಂಕರ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಪೋಕ್ಸೋ ತಿದ್ದುಪಡಿಗೆ ರಾಜ್ಯಸಭೆ ಅಸ್ತು

ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗರಿಷ್ಠ ಗಲ್ಲುಶಿಕ್ಷೆ ವಿಧಿಸುವ ಪ್ರಸ್ತಾಪವಿರುವ ಪೋಕ್ಸೋ ತಿದ್ದುಪಡಿ ವಿಧೇಯಕ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸದಸ್ಯರೆಲ್ಲರೂ ವಿಧೇಯಕದಲ್ಲಿನ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ

ಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ಪ್ರಧಾನಿ ಮೋದಿ ಭೇಟಿ ವೇಳೆ ಕಾಶ್ಮೀರ ಮಧ್ಯಸ್ಥಿಕೆ ವಿಚಾರ ಪ್ರಸ್ತಾಪವಾಗಿಯೇ ಇಲ್ಲ. ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮಧ್ಯಸ್ಥಿಕೆ ಮಾಡುವಂತೆ ಮೋದಿ ಕೋರಿಕೊಂಡಿದ್ದರು ಎಂದು ಟ್ರಂಪ್‌ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾದ ಹಿನ್ನೆಲೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೂ ಮೊದಲು ಸದನದಲ್ಲಿ ಗದ್ದಲವೆಬ್ಬಿಸಿದ ಪ್ರತಿಪಕ್ಷಗಳು, ಪ್ರಧಾನಿ ಮೋದಿಯವರೇ ಖುದ್ದಾಗಿ ಸದನಕ್ಕೆ ಬಂದು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದವು. ಜತೆಗೆ, ಒಂದು ಹಂತದಲ್ಲಿ ಸಭಾತ್ಯಾಗವನ್ನೂ ಮಾಡಿದವು.
ಉಗ್ರ ಸೇರ್ಪಡೆ ಇಳಿಮುಖ: ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ಸೇರುತ್ತಿರುವ ಯುವಕರ ಪ್ರಮಾಣ ಶೇ.40ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ. ಇಂದು ತಲಾಖ್‌ ವಿಧೇಯಕ: ಗುರುವಾರ ತ್ರಿವಳಿ ತಲಾಖ್‌ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದ್ದು, ಸಂಸದರಿಗೆ ಬಿಜೆಪಿ ವಿಪ್‌ ಜಾರಿ ಮಾಡಿದೆ. ಎಲ್ಲರೂ ಸದನದಲ್ಲಿ ಹಾಜರಿರುವಂತೆ ಸೂಚಿಸಿದೆ.

ಮುಖ್ಯಾಂಶಗಳು

•ಸದ್ಯ ಸಂಘಟನೆಗಳನ್ನು ಮಾತ್ರ ಉಗ್ರ ಸಂಘಟನೆ ಎಂದು ಘೋಷಿಸಲು ಅವಕಾಶ
•ಈ ಕಾಯ್ದೆ ಜಾರಿಯಾದರೆ ವ್ಯಕ್ತಿಯನ್ನೂ ಉಗ್ರ ಎಂದು ಘೋಷಿಸಲು ಅವಕಾಶ
•ಉಗ್ರರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯನ್ನು ಉಗ್ರ ಎಂದು ಎನ್‌ಐಎ ಘೋಷಿಸಬಹುದು •ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ 4ನೇ ಶೆಡ್ಯೂಲ್ಗೆ ತಿದ್ದುಪಡಿ

ಟಾಪ್ ನ್ಯೂಸ್

kgf-babu

“ಪತ್ನಿ, ಮಗಳ ಪ್ರಾಣಕ್ಕೆ ಅಪಾಯ ತರುವ ಸಂಚು ನಡೆದಿತ್ತು”: ಕಣ್ಣೀರಿಟ್ಟ ಕೆಜೆಎಫ್ ಬಾಬು

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ, ಕೊಲೆ ಶಂಕೆ

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ದಟ್ಟ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

arrested

ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಮಂಗಳೂರಿನಲ್ಲಿ ರೌಡಿಶೀಟರ್ ನ ಬಂಧನ

ರಾಧೆ ಶ್ಯಾಮ್

‘ಆಶಿಕಿ ಆ ಗಯಿ’ ಎಂದ ಪ್ರಭಾಸ್-ಪೂಜಾ: ಟ್ರೆಂಡಿಂಗ್ ನಲ್ಲಿದೆ ರಾಧೆ ಶ್ಯಾಮ್ ಚಿತ್ರದ ಹೊಸ ಹಾಡು

hdk

ಕರೆಯದೆ ಇರುವವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ : ಎಚ್ ಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rape

ಕಚೇರಿಗೆ ಎಳೆದೊಯ್ದು 12 ರ ಬಾಲಕಿಯ ರೇಪ್ : ವಕೀಲನ ಬಂಧನ

parliment

ಸಂಸತ್ತಿನಲ್ಲಿ ಅಗ್ನಿ ಅವಘಡ : ತಕ್ಷಣ ನಿಯಂತ್ರಣಕ್ಕೆ ತಂದ ಅಗ್ನಿ ಶಾಮಕ ದಳ

ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್, ಐಇಡಿ ತಜ್ಞ ಸೇರಿ ಇಬ್ಬರು ಉಗ್ರರು ಬಲಿ

ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್, ಐಇಡಿ ತಜ್ಞ ಸೇರಿ ಇಬ್ಬರು ಉಗ್ರರು ಬಲಿ

farmer

78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

MUST WATCH

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

ಹೊಸ ಸೇರ್ಪಡೆ

kgf-babu

“ಪತ್ನಿ, ಮಗಳ ಪ್ರಾಣಕ್ಕೆ ಅಪಾಯ ತರುವ ಸಂಚು ನಡೆದಿತ್ತು”: ಕಣ್ಣೀರಿಟ್ಟ ಕೆಜೆಎಫ್ ಬಾಬು

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

cyber crime

ಆಸ್ಪತ್ರೆ ಮೇಲೆ ಸೈಬರ್‌ ದಾಳಿ, ದತ್ತಾಂಶಗಳಿಗೆ ಕನ್ನ

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ, ಕೊಲೆ ಶಂಕೆ

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ದಟ್ಟ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.