
ಸಂಧಾನಕ್ಕಾಗಿ ದೇವೇಂದ್ರ ಫಡ್ನವೀಸ್‌ಗೆ ಉದ್ಧವ್ ಠಾಕ್ರೆ ಕರೆ?
Team Udayavani, Jun 28, 2022, 7:30 AM IST

ಮುಂಬಯಿ: ಶಿವಸೇನೆ ಶಾಸಕರು ಮತ್ತು ಸಚಿವರು ಬಂಡಾಯವೆದ್ದ ದಿನದಂದು ಫೇಸ್‌ಬುಕ್ ಲೈವ್ ಬಂದು ಮಾತನಾ ಡಿದ್ದ ಸಿಎಂ ಠಾಕ್ರೆ ಅಂದೇ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ತಡೆದಿದ್ದರು. ಅದರ ಮಾರನೇ ದಿನವೂ ಸಿಎಂ ರಾಜೀನಾಮೆ ನೀಡಲು ಸಜ್ಜಾಗಿದ್ದು, ಆಗಲೂ ಪವಾರ್ ತಡೆದಿದ್ದಾಗಿ ಮೂಲಗಳು ತಿಳಿಸಿವೆ.
ಜೂ.21ರಂದು ರಾತ್ರಿ ಸಿಎಂ ಉದ್ಧವ್, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ಗೆ ಕರೆ ಮಾಡಿದ್ದರು. ಈ ವೇಳೆ ಬಿಜೆಪಿ ಜತೆಗೆ ರಾಜಿ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
ರಾವತ್‌ಗೆ ಇ.ಡಿ. ನೋಟಿಸ್
ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಯ ಹೊಯ್ದಾಟದ ನಡುವೆಯೇ ಶಿವಸೇನೆಯ ವಕ್ತಾರ ಸಂಜಯ ರಾವತ್ ಅವರಿಗೆ ಇ.ಡಿ.ನೋಟಿಸ್ ಜಾರಿ ಮಾಡಿದೆ. ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರವೇ ವಿಚಾರಣೆಗೆ ಬರುವಂತೆ ಸೂಚಿಸಿದೆ. “ಜೂ. 28ರಂದು ವಿಚಾರಣೆಗೆ ಹಾಜರಾಗಲು ಅಸಾಧ್ಯ. ಸಮಯಾವಕಾಶ ಬೇಕು’ ಎಂದು ರಾವತ್ ಮನವಿ ಮಾಡಿದ್ದಾರೆ. ಹಾಗೆಯೇ “ಇದೊಂದು ಸಂಚು.
ರಾಜಕೀಯ ವಿರೋಧಿಗಳ ವಿರುದ್ಧ ಹೋರಾಟ ನಡೆಸದಂತೆ ತಡೆಯುವ ಕ್ರಮ. ಇ.ಡಿ. ವಿಚಾರಣೆಗೆ ಹಾಜ ರಾಗುವಂತೆ ಸಮನ್ಸ್ ನೀಡಿದೆ. ನಾವು, ಬಾಳಾ ಸಾಹೇಬರ ಶಿವಸೈನಿಕರು ಈಗ ದೊಡ್ಡ ಯುದ್ಧದಲ್ಲಿ ತೊಡಗಿದ್ದೇವೆ. ನನ್ನ ತಲೆಯನ್ನು ಕಡಿದರೂ, ಗುವಾಹಾಟಿ ದಾರಿ ಹಿಡಿಯಲಾರೆ. ನನ್ನನ್ನು ಬಂಧಿಸಿ ‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Land For Jobs Scam: ಲಾಲು ಪ್ರಸಾದ್, ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿಗೆ ಜಾಮೀನು

Tragic: ದೇವರ ದರ್ಶನದಿಂದ ವಾಪಾಸಾಗುವ ವೇಳೆ ದುರಂತ: ಕಾರು– ಟ್ರಕ್ ಅಪಘಾತದಲ್ಲಿ 8ಮಂದಿ ಸಾವು

News Click: ‘ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

Cloudburst: ಸಿಕ್ಕಿಂನಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ
MUST WATCH
ಹೊಸ ಸೇರ್ಪಡೆ

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್ ಸಿಂಹ ವಾಗ್ದಾಳಿ

Udupi: ಆಭರಣ ಜ್ಯುವೆಲ್ಲರ್ಸ್ ಮಾಲಕ ಮಧುಕರ್ ಕಾಮತ್ ಪತ್ನಿ ರಾಧಾ ಕಾಮತ್ ನಿಧನ

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ