ಪತ್ನಿಯರ ಮೂಲಕ ಎಂವಿಎ ಉಳಿಸಲು ಯತ್ನ: ರಂಗಕ್ಕೆ ಇಳಿದ ಉದ್ಧವ್‌ ಪತ್ನಿ ರಶ್ಮಿ ಠಾಕ್ರೆ

16 ಭಿನ್ನ ಶಾಸಕರಿಗೆ ಕೇಂದ್ರದ ಭದ್ರತೆ; ಶಿಂಧೆಗೆ ಇಲ್ಲ

Team Udayavani, Jun 27, 2022, 6:45 AM IST

thumb 1 wife

ಮುಂಬಯಿ: ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ ಅಘಾಡಿ ಸರಕಾರ ಉಳಿಸುವ ನಿಟ್ಟಿನಲ್ಲಿ ಸಿಎಂ ಉದ್ಧವ್‌ ಠಾಕ್ರೆಯವರ ಪತ್ನಿ ರಶ್ಮಿ ಠಾಕ್ರೆ ರಂಗಕ್ಕೆ ಇಳಿದಿದ್ದಾರೆ.

ಈ ಮೂಲಕ ಬಿಕ್ಕಟ್ಟನ್ನು ಎದುರಿಸು­ತ್ತಿರುವ ಪತಿಗೆ ನೆರವಾಗು ತ್ತಿದ್ದಾರೆ. ಅದು ಹೇಗೆ ಬಲ್ಲಿರಾ? ಸಚಿವ ಏಕನಾಥ ಶಿಂಧೆಯವರ ಜತೆಗೆ ತೆರಳಿರುವ ಶಾಸಕರ ಪತ್ನಿಯರನ್ನು ಸಂಪರ್ಕಿಸುವ ಯತ್ನವನ್ನು ಅವರು ಆರಂಭಿಸಿದ್ದಾರೆ.

ಉದ್ಧವ್‌ ಠಾಕ್ರೆ ಪರವೇ ನಿಲ್ಲುವಂತೆ ಪತ್ನಿಯರಿಗೆ ಫೋನ್‌ ಮಾಡ­ಲಾರಂಭಿಸಿ­ದ್ದಾರೆ. ಮುಖ್ಯಮಂತ್ರಿ ಪತ್ನಿ ಫೋನ್‌ ಮಾಡಿದ್ದಾರೆ ಎಂದ ಮೇಲೆ ಅದನ್ನು ನಿರಾಕರಿಸಲು ಸಾಧ್ಯವೇ?

ಹೀಗಾಗಿ, ಪತ್ನಿಯರು ಪತಿಯಂದಿರ ಮನವೊಲಿಕೆಗೆ ಮನಸ್ಸು ಮಾಡಬಹುದು ಎಂಬ ದೂರಾಲೋಚನೆ ರಶ್ಮಿ ಠಾಕ್ರೆ ಅವರದ್ದು. ಹೀಗಾಗಿ ಕೆಲವು ಶಾಸಕರ ಪತ್ನಿಯರು ದೂರದ ಗುವಾಹಾಟಿ­ಯಲ್ಲಿರುವ ತಮ್ಮ ಪತಿಯಂದಿರಿಗೆ ಡಯಲ್‌ ಮಾಡಿದ್ದಾರಂತೆ!

ಶಿಂಧೆ ಹೆಸರು ಇಲ್ಲ: ಭಿನ್ನಮತೀಯ ಶಾಸಕರಿಗೆ ಮಹಾಸರಕಾರ ಭದ್ರತೆ ನೀಡಿಲ್ಲ ಎಂಬ ದೂರುಗಳ ನಡುವೆಯೇ ಕೇಂದ್ರವು ಶಿವಸೇನೆಯ 16 ಭಿನ್ನ­ಮತೀಯ ಶಾಸಕರಿಗೆ “ವೈ’ ಮಾದರಿ ಭದ್ರತೆ ನೀಡಲು ಆದೇಶ ನೀಡಿದೆ. ಅದರ ಅನ್ವಯ ಮುಂದಿನ ದಿನಗಳಲ್ಲಿ ಸಿಆರ್‌ಪಿಎಫ್ ಯೋಧರು ಶಾಸಕರಿಗೆ ಭದ್ರತೆ ನೀಡಲಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಸಚಿವ ಏಕನಾಥ ಶಿಂಧೆ ಹೆಸರು ಇಲ್ಲದಿರುವುದು ಅಚ್ಚರಿ ತಂದಿದೆ.

ಕೇಂದ್ರದ ನಿರ್ಧಾರವನ್ನು ಮಹಾ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಆಕ್ಷೇಪಿಸಿ ದ್ದಾರೆ. “ಕಾಶ್ಮೀರ ಪಂಡಿತರಿಗೆ ಸಿಆರ್‌ಪಿಎಫ್ ಭದ್ರತೆ ನೀಡಬೇಕಾಗಿತ್ತು. ಭಿನ್ನಮತೀಯ ಶಾಸಕರಿಗೆ ಅಲ್ಲ’ ಎಂದಿದ್ದಾರೆ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿ­ದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಸೋಲು­ವಂತೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಶಿಂಧೆಗೆ ಸಿಎಂ ಹುದ್ದೆ ಆಫ‌ರ್‌: ಭಿನ್ನಮತೀಯ ಶಾಸಕರು ಗುವಾಹಾಟಿಯಲ್ಲಿ ಬಂಧಿಗಳಾಗಿದ್ದಾರೆ ಎಂದು ಹೇಳಿರುವ ಸಚಿವ ಆದಿತ್ಯ ಠಾಕ್ರೆ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೇ 30ರಂದು ನಡೆದಿದ್ದ ಸಭೆಯಲ್ಲಿ ಸಿಎಂ ಉದ್ಧವ್‌ ಠಾಕ್ರೆ ಅವರು ಏಕನಾಥ ಶಿಂಧೆಗೆ ಸಿಎಂ ಹುದ್ದೆಯನ್ನು ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದಿದ್ದಾರೆ. ಈ ಸಂಚಿನಲ್ಲಿ ಬಿಜೆಪಿ ಇಲ್ಲ ಎಂದಾದರೆ, ಗುವಾಹಾಟಿಯಲ್ಲಿ ಭಿನ್ನಮತೀ­ಯರನ್ನು ಅವರೇಕೆ ಭೇಟಿಯಾಗುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

cm-bommai

ಎಸಿಬಿ ರದ್ದು; ಚರ್ಚೆಯ ನಂತರ ಮುಂದಿನ ತೀರ್ಮಾನ: ಸಿಎಂ ಬೊಮ್ಮಾಯಿ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

1-addsad

ಸ್ಪೈಸ್‌ಜೆಟ್ ವಿಮಾನದಲ್ಲಿ ಬಾಡಿಬಿಲ್ಡರ್ ಧೂಮಪಾನದ ವಿಡಿಯೋ ವೈರಲ್

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಇಲ್ಲಿ ನಿತ್ಯ ಬೆಳಗ್ಗೆ ರಾಷ್ಟ್ರಗೀತೆ ಮೊಳಗುತ್ತೆ!

ಇಲ್ಲಿ ನಿತ್ಯ ಬೆಳಗ್ಗೆ ರಾಷ್ಟ್ರಗೀತೆ ಮೊಳಗುತ್ತೆ!

MUST WATCH

udayavani youtube

ರಸ್ತೆ ಗುಂಡಿಯ ಕೊಳಚೆ ನೀರಿನಲ್ಲೇ ಯೋಗ, ಸ್ನಾನ ಮಾಡಿದ ವ್ಯಕ್ತಿ

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

ಹೊಸ ಸೇರ್ಪಡೆ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

tdy-38

ಮೋಹನದಾಸ್‌ ಪೈ ಅವರಿಗೆ ನುಡಿನಮನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

crime

ಕಲಬುರಗಿ: ತಾಯಿ, ಮೂವರು ಮಕ್ಕಳ ಶವ ಬಾವಿಯಲ್ಲಿ ಪತ್ತೆ

1-adadasd

ಮಹಾರಾಜ ಟಿ20 ಕೂಟ: ಮಂಗಳೂರಿಗೆ ಮೊದಲ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.