
ನಿಷೇಧಿತ ಉಗ್ರ ಪಟ್ಟಿಯಿಂದ ಮುಕ್ತಿ: ಸಯೀದ್ ಮನವಿಗೆ UN ತಿರಸ್ಕಾರ
Team Udayavani, Mar 7, 2019, 12:23 PM IST

ಹೊಸದಿಲ್ಲಿ : ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ, 2008ರ ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದಾವಾ (JuD) ಉಗ್ರ ಸಂಘಟನೆಯ ಮುಖ್ಯಸ್ಥ ಹಾಫೀಜ್ ಸಯೀದ್ ತನ್ನ ಹೆಸರನ್ನು ನಿಷೇಧಿತ ಉಗ್ರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಮಾಡಿಕೊಂಡಿರುವ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ. ಭಾರತ ಸರಕಾರದ ಮೂಲಗಳು ಈ ವಿದ್ಯಮಾನವನ್ನು ಇಂದು ಗುರುವಾರ ದೃಢೀಕರಿಸಿವೆ.
ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಉಗ್ರ ದಾಳಿಯನ್ನು ನಡೆಸಿದ್ದ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸಬೇಕೆಂಬ ಹೊಸ ಕೋರಿಕೆಯನ್ನು ವಿಶ್ವಸಂಸ್ಥೆಯ 1267 ನಿಷೇಧ ಸಮಿತಿಯು ಸ್ವೀಕರಿಸಿರುವ ಸಂದರ್ಭದಲ್ಲೇ, ನಿಷೇಧಿತ ಉಗ್ರ ಪಟ್ಟಿಯಿಂದ ತನ್ನ ಹೆಸರನ್ನುತೆಗೆದು ಹಾಕಬೇಕೆಂಬ ಹಾಫೀಜ್ ಸಯೀದ್ ನ ಕೋರಿಕೆಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವುದು ಗಮನಾರ್ಹವಾಗಿದೆ.
ಪುಲ್ವಾಮಾ ದಾಳಿ ತನ್ನದೇ ಕೃತ್ಯವೆಂದು ಹೇಳಿಕೊಂಡಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಅದರ ಹೊಣೆ ಹೊತ್ತಿರುವುದನ್ನು ವಿಶ್ವಸಂಸ್ಥೆ ಗಮನಿಸಿದೆ.
ಜೆಯುಡಿ ಮುಖ್ಯಸ್ಥ ಹಾಫೀಜ್ ಸಯೀದ್, ಪಾಕ್ ಮೂಲದ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆ ಸಹ ಸ್ಥಾಪಕನೂ ಆಗಿದ್ದಾನೆ. ಈತ ಭಾರತದ ವಿರುದ್ಧದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದಕ್ಕೆ ಭಾರತ ಬಲವಾದ ಸಾಕ್ಷ್ಯ, ವಿವರ, ಮಾಹಿತಿಗಳನ್ನು ವಿಶ್ವಸಂಸ್ಥೆಗೆ ಕೊಟ್ಟಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ.
2008ರ ಡಿ.10ರಂದು ವಿಶ್ವಸಂಸ್ಥೆಯು ಜಮಾತ್ ಉದ್ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಾಫೀಜ್ ಸಯೀದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸಿದೆ. ಈತ ಮಾಸ್ಟರ್ ಮೈಂಡ್ ಆಗಿದ್ದು ಕೊಂಡು ನಡೆಸಿದ್ದ ಮುಂಬಯಿ ಉಗ್ರ ದಾಳಿಗೆ 166 ಮಂದಿ ಅಮಾಯಕರು ಬಲಿಯಾಗಿದ್ದರು.
ಪ್ರಕೃತ ಪಾಕಿಸ್ಥಾನದಲ್ಲಿ ಗೃಹ ಬಂಧನದಲ್ಲಿರುವ ಹಾಫೀಜ್ ಸಯೀದ್, ತನ್ನ ಹೆಸರನ್ನು ಉಗ್ರ ಪಟ್ಟಿಯಿಂದ ತೆಗೆದುಹಾಕುವಂತೆ ವಿಶ್ವಸಂಸ್ಥೆಯನ್ನು ಕೋರಿ, ಲಾಹೋರ್ ಮೂಲದ ಮಿರ್ಜಾ ಆ್ಯಂಡ್ ಮಿರ್ಜಾ ಕಾನೂನು ಸೇವಾ ಸಂಸ್ಥೆಯ ಮೂಲಕ 2017ರಲ್ಲೇ ಮನವಿ ಸಲ್ಲಿಸಿದ್ದ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೆ ತಡೆ
MUST WATCH
ಹೊಸ ಸೇರ್ಪಡೆ

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ರಾಮನ ಅವತಾರ ತಾಳಿದ ರಿಷಿ; ಫಸ್ಟ್ ಲುಕ್ ಪೋಸ್ಟರ್ ಬಂತು

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್