ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೇಲೆ ಮೋದಿ ಮಾಸ್ಟರ್ ಸ್ಟ್ರೋಕ್
Team Udayavani, Jan 5, 2017, 11:07 AM IST
ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ತಲೆಮರೆಸಿಕೊಂಡಿರುವ, ಭಾರತದ ಮೋಸ್ಟ್ ವಾಂಟೆಡ್ ಭೂಗತ ಜಗತ್ತಿನ ಪಾತಕಿ, ದಾವೂದ್ ಇಬ್ರಾಹಿಂ ಗೆ ಸೇರಿದ 15,000 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಯುಎಇ ಅಧಿಕಾರಿಗಳು ವಶಪಡಿಸಿಕೊಂಡಿರುವ ಬೆಳವಣಿಗೆಯನ್ನು ಪ್ರದಾನಿ ನರೇಂದ್ರ ಮೋದಿ ಅವರು 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ವಿರುದ್ಧ ನಡೆಸಿರುವ ಮಾಸ್ಟರ್ ಸ್ಟ್ರೋಕ್ ಆಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ದಾವೂದ್ ಇಬ್ರಾಹಿಂ ಗೆ ಸೇರಿದ 15,000 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಯುಎಇ ಅಧಿಕಾರಿಗಳು ವಶಪಡಿಸಿಕೊಂಡಿರುವುದು ಪ್ರಧಾನಿ ಮೋದಿ ಅವರು ಸಾಧಿಸಿರುವ ಅತ್ಯಂತ ಮಹತ್ವದ ರಾಜತಾಂತ್ರಿಕ ಯಶಸ್ಸಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಭಾರತ ಸರಕಾರ ಪಾತಕಿ ದಾವೂದ್ ಇಬ್ರಾಹಿಂ ಬಗೆಗಿನ ಸಂಪೂರ್ಣ ಮಾಹಿತಿಯ ಕಡತವನ್ನು ಯುಎಇ ಅಧಿಕಾರಿಗಳಿಗೆ ನೀಡಿತ್ತು. ಆದರ ಆಧಾರದ ಮೇಲೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿತ್ತು.
ದಾವೂದ್ ಇಬ್ರಾಹಿಂ ಈಗಲೂ ಪಾಕಿಸ್ಥಾನದಲ್ಲೇ ಅಡಗಿಕೊಂಡಿದ್ದರೂ ಪಾಕ್ ಸರಕಾರ ಮಾತ್ರ ಆತ ತನ್ನ ದೇಶದಲ್ಲಿ ಇಲ್ಲ ಎಂದು ಹೇಳುತ್ತಲೇ ಬಂದಿದೆ ಮಾತ್ರವಲ್ಲದೆ ಆತನ ಪಾತಕ ಕೃತ್ಯಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ.