ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ, ಹುಡುಗಿಗೆ ಆ್ಯಸಿಡ್‌ ಎರಚಿದ ಕಾಮಾಂಧರು, ಓರ್ವ ಅರೆಸ್ಟ್‌

Team Udayavani, Apr 20, 2019, 4:27 PM IST

ಪಟ್ನಾ : ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಮೂವರು ಅಪರಿಚಿತ ಪುರುಷರು ಹದಿಹರೆಯದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿ ಅದಕ್ಕೆ ಆಕೆ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಆ್ಯಸಿಡ್‌ ಎಸೆದ ಅತ್ಯಮಾನುಷ ಘಟನೆ ವರದಿಯಾಗಿದೆ.ಪೊಲೀಸರು ಈ ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಅಲೀಗಂಜ್‌ ನ ಗಂಗಾ ವಿಹಾರ್‌ ಕಾಲನಿಯಲ್ಲಿ ಈ ಘಟನೆ ನಿನ್ನೆ ಶುಕ್ರವಾರ ನಡೆದಿದೆ.

ಮೂವರು ಪುರುಷರು ಹುಡುಗಿಯ ಮನೆಯನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಹುಡುಗಿಯ ತಾಯಿಗೆ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ಹುಡುಗಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಹುಡುಗಿ ಪ್ರತಿರೋಧ ಒಡ್ಡಿದಾಗ ಕಾಮಾಂಧರು ಆಕೆಯ ಮೇಲೆ ಆ್ಯಸಿಡ್‌ ಎರಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ