ಉತ್ತರಪ್ರದೇಶ: ಹಾಡಹಗಲೇ ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಿಟ್ಟು ವ್ಯಕ್ತಿಯ ಹತ್ಯೆ!

ಗುಂಡಿನ ದಾಳಿಯಿಂದಾಗಿ ಜನರು ದಿಕ್ಕಾಪಾಲಾಗಿ ಓಡಿಹೋಗಿದ್ದು, ಕಾಲ್ತುಳಿತ ಸಂಭವಿಸಿದೆ

Team Udayavani, Oct 16, 2020, 12:26 PM IST

ಉತ್ತರಪ್ರದೇಶ: ಹಾಡಹಗಲೇ ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಿಟ್ಟು ವ್ಯಕ್ತಿಯ ಹತ್ಯೆ

ಲಕ್ನೋ/ಬಲ್ಲಿಯಾ: ಮಾತಿನ ಚಕಮಕಿಯ ಪರಿಣಾಮ ಬಿಹಾರ ಬಿಜೆಪಿ ಶಾಸಕರ ಸಹಾಯಕ ಸ್ಥಳೀಯ ಅಧಿಕಾರಿಯ ಸಮ್ಮುಖದಲ್ಲಿಯೇ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಬಲ್ಲಿಯಾ ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.

46ವರ್ಷದ ಜೈಪ್ರಕಾಶ್ ಅವರನ್ನು ಬಿಜೆಪಿ ಕಾರ್ಯಕರ್ತ ಧೀರೇಂದ್ರ ಸಿಂಗ್ ಗುಂಡು ಹೊಡೆದು ಹತ್ಯೆಗೈದಿದ್ದಾನೆ. ಈತ ಶಾಸಕ ಸುರೇಂದ್ರ ಸಿಂಗ್ ನಿಕಟವರ್ತಿ ಎಂದು ವರದಿ ಹೇಳಿದೆ. ಗುಂಡಿನ ದಾಳಿಯಿಂದಾಗಿ ಜನರು ದಿಕ್ಕಾಪಾಲಾಗಿ ಓಡಿಹೋಗಿದ್ದು, ಕಾಲ್ತುಳಿತ ಸಂಭವಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ನಾಟಕೀಯ ಬೆಳವಣಿಗೆಯ ದೃಶ್ಯಾವಳಿಯನ್ನು ಎನ್ ಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದು, ಗದ್ದೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದ ವೇಳೆ ಈ ಘರ್ಷಣೆ ನಡೆದಿದ್ದು, ಮೂರು ಸುತ್ತು ಗುಂಡು ಹೊಡೆದು ವ್ಯಕ್ತಿಯನ್ನು ಹತ್ಯೆಗೈದಿರುವುದನ್ನು ಕಂಡು ಜನರು ಹೆದರಿ ಎಲ್ಲೆಂದರಲ್ಲಿ ಓಡಿ ಹೋಗುತ್ತಿರುವ ದೃಶ್ಯ 5 ಸೆಕೆಂಡುಗಳ ವಿಡಿಯೋದಲ್ಲಿ ಸೆರೆಯಾಗಿದೆ.

ರೇಶನ್ ಅಂಗಡಿ ಹಂಚಿಕೆ ಕುರಿತ ಸಭೆಯನ್ನು ಅಧಿಕಾರಿಯೊಬ್ಬರು ದುರ್ಜನ್ ಪುರ್ ಎಂಬಲ್ಲಿ ರದ್ದುಗೊಳಿಸಿದ ಬಳಿಕ ನೆರೆದಿದ್ದ ಜನರ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಜೈಪ್ರಕಾಶ್ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ಪಿಟಿಐಗೆ ತಿಳಿಸಿದ್ದಾರೆ.

ಟೆಂಟ್ ವೊಂದರಲ್ಲಿ ಸಭೆಯನ್ನು ನಡೆಸಲಾಗಿತ್ತು. ಈ ವೇಳೆ ಜನರು ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದರು. ಅಲ್ಲದೇ ಅಧಿಕಾರಿಗಳು, ಪೊಲೀಸರು ಕೂಡಾ ಹಾಜರಿದ್ದರು ಎಂದು ಸ್ಥಳೀಯ ನಿವಾಸಿಗಳು ವಿವರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಆರೋಪಿ ಬಲ್ಲಿಯಾದ ಬಿಜೆಪಿ ಮಾಜಿ ಯೋಧರ ಘಟಕದ ಮುಖ್ಯಸ್ಥನಾಗಿರುವುದಾಗಿ ತಿಳಿಸಿದ್ದು, ಇಂತಹ ಘಟನೆ ಎಲ್ಲಾ ಕಡೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚನೆ ನೀಡಿರುವುದಾಗಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಾಸ್ಥಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

Covid test

ರಾಜ್ಯದಲ್ಲಿ ಇಂದೂ 40 ಸಾವಿರ ದಾಟಿದ ಕೋವಿಡ್ ಕೇಸ್ : 21 ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

nirani

ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ: ಸಚಿವ ನಿರಾಣಿ

CM @ 2

ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಮುನ್ನೆಲೆಗೆ : ಈ ವಾರ ಸಿಎಂ ದೆಹಲಿಗೆ ?

1-sdsad

ಗೋವಾ ಸಿಎಂ ಅಭ್ಯರ್ಥಿ: ಭಂಡಾರಿ ಸಮುದಾಯಯಕ್ಕೆ ಮಣೆ ಹಾಕಿದ ಆಪ್

18 ಗಂಟೆಗಳ ಬಳಿಕ ಶಿವಗಂಗಾ ಫಾಲ್ಸ್ ನಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

18 ಗಂಟೆಗಳ ಬಳಿಕ ಶಿವಗಂಗಾ ಫಾಲ್ಸ್ ನಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdsad

ಗೋವಾ ಸಿಎಂ ಅಭ್ಯರ್ಥಿ: ಭಂಡಾರಿ ಸಮುದಾಯಯಕ್ಕೆ ಮಣೆ ಹಾಕಿದ ಆಪ್

1-adasd

ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ: ಸಚಿವೆ ಶೋಭಾ ಮಹತ್ವದ ಪಾತ್ರ

money 1

ಇಡಿ ದಾಳಿ: ಪಂಜಾಬ್ ಸಿಎಂ ಚೆನ್ನಿ ಸಂಬಂಧಿಯಿಂದ 10 ಕೋಟಿ ರೂ ನಗದು ವಶ

ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ

ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ

1-sasdsa

ಗಡಿ ವಿವಾದ ಇತ್ಯರ್ಥ : ಸರ್ವ ಪಕ್ಷ ಸಭೆ ಕರೆದ ಆಸ್ಸಾಂ ಸಿಎಂ

MUST WATCH

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

ಹೊಸ ಸೇರ್ಪಡೆ

ಕೊರಟಗೆರೆ : ಕೋವಿಡ್ ನಿಯಮ ಪಾಲಿಸಿ ಗಣರಾಜ್ಯೋತ್ಸವ ಆಚರಿಸಲು ತಹಶಿಲ್ದಾರ್ ಸೂಚನೆ

ಕೊರಟಗೆರೆ : ಕೋವಿಡ್ ನಿಯಮ ಪಾಲಿಸಿ ಗಣರಾಜ್ಯೋತ್ಸವ ಆಚರಿಸಲು ತಹಶಿಲ್ದಾರ್ ಸೂಚನೆ

1-saad

ಬ್ರಹ್ಮಾವರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಸ್ಥಾಪನೆಯಾಗಲಿದೆ ಖೇಲೊ ಇಂಡಿಯಾ ತರಬೇತಿ ಕೇಂದ್ರ

ಸ್ಥಾಪನೆಯಾಗಲಿದೆ ಖೇಲೊ ಇಂಡಿಯಾ ತರಬೇತಿ ಕೇಂದ್ರ

ಇತಿಹಾಸದ ಪುಟ ಸೇರಲಿರುವ ಹಳೆ ಮುನ್ಸಿಪಾಲಿಟಿ ಕಟ್ಟಡ!

ಇತಿಹಾಸದ ಪುಟ ಸೇರಲಿರುವ ಹಳೆ ಮುನ್ಸಿಪಾಲಿಟಿ ಕಟ್ಟಡ!

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.