ಮುಸ್ಲಿಂ ವಿವಾಹಕ್ಕೆ ಪ್ರತ್ಯೇಕ ನೋಂದಣಿ ಕಡ್ಡಾಯ
Team Udayavani, Aug 4, 2017, 8:10 AM IST
ಲಕ್ನೋ: ಉತ್ತರ ಪ್ರದೇಶದಲ್ಲಿ ಬಹುಪತ್ನಿತ್ವ ಆಯ್ದುಕೊಳ್ಳುವ ಮುಸ್ಲಿಮರು, ಪ್ರತಿ ವಿವಾಹವನ್ನೂ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಯೋಗಿ ಆದಿತ್ಯನಾಥ್ ಸರಕಾರ ಸೂಚನೆ ಹೊರಡಿಸಿದೆ. ಆದರೆ ಧರ್ಮದ ಆಚರಣೆಗೆ ಯಾವುದೇ ನಿಯಂತ್ರಣ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಉತ್ತರಪ್ರದೇಶ ವಿವಾಹ ನೋಂದಣಿ ನಿಯಮಾವಳಿ 2017ನ್ನು ಸಂಪುಟ ಸಮಿತಿ ಆ.1ರಂದು ಅಂಗೀಕರಿಸಲಾಗಿದೆ.
ನಿಯಮಾವಳಿ ಪ್ರಕಾರ ಮುಸ್ಲಿಮರಿಗೆ ಗರಿಷ್ಠ ನಾಲ್ಕು ವಿವಾಹಗಳಿಗೆ ಅವಕಾಶವಿದೆ. ಪ್ರತಿ ವಿವಾಹಕ್ಕೂ ಪ್ರತ್ಯೇಕ ನೋಂದಣಿ ಫಾರಂಗಳನ್ನು ತುಂಬಿ ನೋಂದಣಿ ಮಾಡಿಸಿಕೊಳ್ಳಬೇಕು ಎನ್ನಲಾಗಿದೆ. ಅದೇ ರೀತಿ ಹಿಂದೂಗಳೂ ಒಂದು ವಿವಾಹದ ನೋಂದಣಿ ಮಾಡಿಸಿಕೊಳ್ಳಬೇಕು. ಮುಸ್ಲಿಮರಲ್ಲಿ ‘ಗರಿಷ್ಠ ನಾಲ್ಕು’ ಎಂದು ಹೇಳುವುದರಿಂದ ತಪ್ಪಾದ ಸಂದೇಶ ಕೊಡುತ್ತದೆ ಎಂದು ಅಖೀಲ ಭಾರತ ಶಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಸ್ಪಿಎಲ್ಬಿ) ಆಕ್ಷೇಪ ಎತ್ತಿದೆ. ಆದರೆ ನೋಂದಣಿ ಕಡ್ಡಾಯಗೊಳಿಸಿದ್ದನ್ನು ಅದು ಸ್ವಾಗತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ