ಪತಂಜಲಿ ಬೆನ್ನಿಗೆ ಯೋಗಿ

Team Udayavani, Jun 7, 2018, 6:15 AM IST

ಲಕ್ನೋ: ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ 6 ಸಾವಿರ ಕೋಟಿ ರೂ. ಮೌಲ್ಯದ ಫ‌ುಡ್‌ ಪಾರ್ಕ್‌ ಸ್ಥಾಪನೆಯಿಂದ ಹಿಂದೆ ಸರಿಯುವುದಾಗಿ ಪತಂಜಲಿ ಸಂಸ್ಥೆ ಘೋಷಿಸಿತ್ತು. ಇದರಿಂದಾಗಿ ಮುಜುಗರಕ್ಕೆ ಒಳಗಾದ ಉತ್ತರ ಪ್ರದೇಶ ಸಿಎಂ ಯೋಜನೆ ಬೇಕಾಗಿರುವ ಜಮೀನು ನೀಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪತಂಜಲಿ ಸಂಸ್ಥೆಯ ಎಂ.ಡಿ. ಆಚಾರ್ಯ ಬಾಲಕೃಷ್ಣ ಜತೆಗೆ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲಿಯೇ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಂಜೂರಾತಿಯನ್ನೂ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪತಂಜಲಿ ತನ್ನ ನಿರ್ಧಾರ ಬದಲಾಯಿಸುವ ಬಗ್ಗೆ ಪರಿಶೀಲಿಸುವುದಾಗಿ ಸಂಸ್ಥೆ ವಕ್ತಾರ ಎಸ್‌.ಕೆ.ತಿಜಾರಾವಾಲ ತಿಳಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ