ಬರಲಿದೆ ದೇಶೀಯ ಆಪರೇಟಿಂಗ್ ಸಿಸ್ಟಮ್: ಏನಿದು ಉಚಿತವಾಗಿ ಬಳಸಬಹುದಾದ ಭಾರ್ ಒಎಸ್?
Team Udayavani, Jan 25, 2023, 7:25 AM IST
ಹೊಸದಿಲ್ಲಿ: ಗೂಗಲ್‌ನ ಆ್ಯಂಡ್ರಾಯ್ಡ ಮತ್ತು ಆ್ಯಪಲ್‌ನ ಐಒಎಸ್‌ಗೆ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಭಾರ್‌ಒಎಸ್ ಎಂಬ ಆಪರೇಟಿಂಗ್ ಸಿಸ್ಟಮ್ ರೂಪುಗೊಂಡಿದ್ದು, ಮಂಗಳವಾರ ಇದರ ಪರೀಕ್ಷೆ ನಡೆಸಲಾಗಿದೆ.
ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಧರ್ಮೇಂದ್ರ ಪ್ರಧಾನ್ ಇದನ್ನು ಬಿಡುಗಡೆಗೊಳಿಸಿದ್ದು, ಟೆಸ್ಟಿಂಗ್ ನಲ್ಲೂ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಎಂಟು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾದ ಬಗ್ಗೆ ಹೇಳಿದ್ದರು. ಕೆಲವರು ಅದನ್ನು ಲೇವಡಿ ಮಾಡಿದ್ದರು. ಆದರೆ ಈಗ ತಾಂತ್ರಿಕ ತಜ್ಞರು, ನಾವೀನ್ಯತ ಪ್ರವೀಣರು, ಉದ್ಯಮಗಳು ಮತ್ತು ನೀತಿ ನಿರೂಪಕರು ಭಾರತದ ಶಕ್ತಿಯ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದರು.
ಏನಿದು ಭಾರ್ ಒಎಸ್?
ಈ ಆಪರೇಟಿಂಗ್ ಸಿಸ್ಟಂನ ಅಭಿವೃದ್ಧಿಗೆ ಕೇಂದ್ರ ಸರಕಾರವೇ ಸಂಪೂರ್ಣವಾಗಿ ಹಣ ವ್ಯಯಿಸಿದೆ. ಹೀಗಾಗಿ ಇದೊಂದು ಮುಕ್ತ ಸಾಫ್ಟ್ ವೇರ್ ಆಗಿದೆ. ಸರಕಾರ ಮತ್ತು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಇದನ್ನು ಬಳಸಬಹುದಾಗಿದೆ. ಅಲ್ಲದೆ ಸ್ಮಾರ್ಟ್ ಫೋನ್ ಉದ್ಯಮವು ಆ್ಯಂಡ್ರಾಯ್ಡ ಮತ್ತು ಐಒಎಸ್ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಸರಕಾರ ಇದನ್ನು ರೂಪಿಸಿದೆ. ಈ ಮೂಲಕ ಮುಂದಿನ ದಿನ ಗಳಲ್ಲಿ ಸ್ವದೇಶಿ ಸ್ಮಾರ್ಟ್ ಫೋನ್‌ಗಳ ತಯಾರಿಕೆಗೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ. ಇದನ್ನು ಜಾಂಡ್‌ಕೆಆಪರೇಶನ್ಸ್ ಪ್ರೈ.ಲಿ.ನ ವರು ರೂಪಿಸಿದ್ದಾರೆ. ಇದಕ್ಕೆ ಐಐಟಿ ಮದ್ರಾಸ್‌ನ ಸೆಕ್ಷನ್ 8 ಕಂಪೆನಿ ಸಹಕಾರ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೆಹಲಿಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ತಡೆ ; ವಿಡಿಯೋ
ಎರಡು ವರ್ಷ ಜೈಲು ಶಿಕ್ಷೆ ಪ್ರಕಟ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ಪಣಜಿ: ಮಹಿಳೆಯರಿಗೆ ಸರಿಯಾದ ಗೌರವ ಕೊಡಬೇಕು, ಅವಮಾನಿಸಬಾರದು: ಡಾ.ನಿರ್ಮಲಾ ಸಿ.ಯಲಿಗಾರ
ಏಜೆನ್ಸಿಗಳ ದುರುಪಯೋಗ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ 14 ವಿರೋಧ ಪಕ್ಷಗಳು
MUST WATCH
ಹೊಸ ಸೇರ್ಪಡೆ
ವರುಣಾ ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ: ಶಾ ಭೇಟಿ ಬಗ್ಗೆ ವಿಜಯೇಂದ್ರ
ದೆಹಲಿಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ತಡೆ ; ವಿಡಿಯೋ
ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ
ಎರಡು ವರ್ಷ ಜೈಲು ಶಿಕ್ಷೆ ಪ್ರಕಟ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ