ಭಾರತಕ್ಕೆ ಆರು ಅಪಾಚೆ ಹೆಲಿಕಾಪ್ಟರ್ ಮಾರಾಟ: ಅಮೆರಿಕ ಅನುಮತಿ
Team Udayavani, Jun 13, 2018, 11:52 AM IST
ಹೊಸದಿಲ್ಲಿ : ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಭಾರೀ ದೊಡ್ಡ ಶಕ್ತಿಯನ್ನು ತುಂಬುವ ರೀತಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಭಾರತಕ್ಕೆ ಆರು ಬೋಯಿಂಗ್ ಎಎಚ್-64ಇ ಅಪಾಚೆ ದಾಳಿ ಹೆಲಿಕಾಪ್ಟರ್‌ಗಳ ಮಾರಾಟಕ್ಕೆ ಅನುಮತಿ ನೀಡಿದೆ.
ಭಾರತದ ಕೋರಿಕೆಯ ಪ್ರಕಾರ ಅದಕ್ಕೆ ಮಾರಾಟ ಮಾಡಲಾಗಿರುವ ಅಪಾಚೆ ಹೆಲಿಕಾಪ್ಟರ್‌ಗಳು ಅದರ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿವೆಯಲ್ಲದೆ ಅಮೆರಿಕ-ಭಾರತ ವ್ಯೂಹಾತ್ಮಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಅಮೆರಿಕ ಹೇಳಿದೆ.
ಅಮೆರಿಕ ಭಾರತಕ್ಕೆ ಮಾರಾಟ ಮಾಡಿರುವ ಆರು ಅಪಾಚೆ ಹೆಲಿಕಾಪ್ಟರ್‌ಗಳಿಂದಾಗಿ ದಕ್ಷಿಣ ಏಶ್ಯದಲ್ಲಿನ ಮೂಲ ಮಿಲಿಟರಿ ಸಂತುಲನೆಯಲ್ಲಿ ಯಾವುದೇ ಬದಲಾವಣೆ ಆಗದು; ಆದರೆ ಭಾರತೀಯ ಸಶಸ್ತ್ರ ಪಡೆಗಳಿಗೆ ನೆಲದಲ್ಲಿ ಎದುರಾಗುವ ಸಶಸ್ತ್ರ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಅದು ವಿಶೇಷ ಶಕ್ತಿ ದೊರಕುವುದು ಎಂದು ಅಮೆರಿಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಅಪಾಚೆ ಹೆಲಿಕಾಪ್ಟರ್‌ಗಳನ್ನು ಬೋಯಿಂಗ್ ಕಂಪೆನಿ ಉತ್ಪಾದಿಸಿದ್ದು ಈ ರೀತಿಯ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿ ಉತ್ಪಾದಿಸುವುದಕ್ಕೆ ಅದು ಟಾಟಾ ಕಂಪೆನಿಯೊಂದಿಗೆ ಭಾಗೀದಾರಿಕೆಯನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮನೆ ಮನೆಯಲ್ಲೂ ತ್ರಿವರ್ಣ: ರಾಷ್ಟ್ರಧ್ವಜ ಹಾರಿಸುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ
ದೇಗುಲದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಮತ್ತೆರಡು ದೇವಸ್ಥಾನದಲ್ಲಿ ಕಳವುಗೈದಿದ್ದನಂತೆ
ಉಳ್ಳಾಲ : ಕಿಂಡರ್ ಗಾರ್ಟನ್ ಶಿಕ್ಷಕಿ ಮೃತದೇಹ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆ
ಪರ್ಕಳ: ಚಿರತೆ ದಾಳಿ ಪ್ರಕರಣ : ಸತ್ತಂತೆ ನಟಿಸಿ ಬದುಕುಳಿದ ಶ್ವಾನ!
ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ