ಫೆ.24-25ರಂದು ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ; ಎರಡು ದಿನದ ಕಾರ್ಯಕ್ರಮ ಹೇಗಿರಲಿದೆ?

ಫೆ.24ರಂದು ಟ್ರಂಪ್ ಗುಜರಾತ್ ನ ಅಹಮದಾಬಾದ್ ಗೆ ಬೆಳಗ್ಗೆ 11ಗಂಟೆಗೆ ಆಗಮಿಸಲಿದ್ದಾರೆ.

Team Udayavani, Feb 19, 2020, 7:00 PM IST

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಿಗದಿತ ವೇಳಾಪಟ್ಟಿಯಂತೆ ಫೆ.24-25ರಂದು ಟ್ರಂಪ್ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷ ವರ್ಧನ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ತಿಂಗಳಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ನಡೆಯುತ್ತಿರುವ ಐದನೇ ಮಾತುಕತೆ ಇದಾಗಿದೆ ಎಂದು ಹೇಳಿದರು.

ಭಾರತದ ಭೇಟಿ ವೇಳೆ ಟ್ರಂಪ್ ಜತೆ ಉನ್ನತ ಮಟ್ಟದ ನಿಯೋಗ ಕೂಡ ಆಗಮಿಸಲಿದೆ. ಭಾರತ ಮತ್ತು ಅಮೆರಿಕ ನಡುವೆ ಅಭೂತಪೂರ್ವ ಮಟ್ಟದ ಮಾತುಕತೆ ನಡೆಯಲಿದೆ ಎಂದರು.

ಕಾರ್ಯಕ್ರಮ ಹೇಗಿರಲಿದೆ?

ಫೆ.24ರಂದು ಟ್ರಂಪ್ ಗುಜರಾತ್ ನ ಅಹಮದಾಬಾದ್ ಗೆ ಬೆಳಗ್ಗೆ 11ಗಂಟೆಗೆ ಆಗಮಿಸಲಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ನಂತರ ಇಬ್ಬರು ನಾಯಕರು ಮೋಟೆರಾ ಸ್ಟೇಡಿಯಂನಿಂದ ರೋಡ್ ಶೋ ನಡೆಸಲಿದ್ದಾರೆ. ನಂತರ ಸಾಬರ್ ಮತಿ ಆಶ್ರಮದ ಬಳಿ ರೋಡ್ ಶೋ ಅಂತ್ಯಗೊಳ್ಳಲಿದೆ.  ಆಶ್ರಮದಲ್ಲಿ 15 ನಿಮಿಷಗಳ ಕಾಲ ಕಳೆಯಲಿದ್ದಾರೆ.

ನಂತರ ನೂತನವಾಗಿ ನಿರ್ಮಿಸಲ್ಪಟ್ಟ ಮೋಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಎಂಬ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಂದಾಜು 1.10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಹಾಗೂ ಟ್ರಂಪ್ 12.30ಕ್ಕೆ ಮೈದಾನಕ್ಕೆ ಆಗಮಿಸಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಕಳೆದ ವರ್ಷ ಅಮೆರಿಕದ ಹೂಸ್ಟನ್ ನಲ್ಲಿ ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಂತೆ ಇರಲಿದೆ ಎಂದು ಹರ್ಷವರ್ಧನ್ ವಿವರಿಸಿದರು.

ಮಧ್ಯಾಹ್ನ 3.30ಕ್ಕೆ ಟ್ರಂಪ್ ಮತ್ತು ಮೆಲಾನಿಯಾ ಆಗ್ರಾಕ್ಕೆ ಹೊರಡಲಿದ್ದು, ಸಂಜೆ 5ಗಂಟೆಗೆ ತಲುಪಲಿದ್ದಾರೆ. ಅಲ್ಲಿಂದ ದಿಲ್ಲಿಗೆ ಬಂದು ರಾತ್ರಿ ಐಟಿಸಿ ಮೌರ್ಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಫೆಬ್ರವರಿ 25ರಂದು ಬೆಳಗ್ಗೆ 10ರಿಂದ 1045ರವರೆಗೆ ರಾಷ್ಟ್ರಪತಿ ಭವನದಲ್ಲಿ ಆತಿಥ್ಯ. ಟ್ರಂಪ್ ಮತ್ತು ಮೆಲಾನಿಯಾ ಈ ವೇಳೆ ರಾಜ್ ಘಾಟ್ ಗೂ ಭೇಟಿ ನೀಡಲಿದ್ದಾರೆ. ಮಾತುಕತೆ ನಂತರ 11.30ಕ್ಕೆ ಹೈದರಾಬಾದ್ ಹೌಸ್ ನಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿ. ಮಧ್ಯಾಹ್ನ 3ಗಂಟೆಗೆ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಸಿಇಒಗಳ ಜತೆ ರೌಂಡ್ ಟೇಬಲ್ ಮಾತುಕತೆ. ಇದು ಭಾರತ ಭೇಟಿ ಕೊನೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ