ತನ್ನ ಮದುವೆಗಾಗಿ ಬರೋಬ್ಬರಿ 100 ಕಿ.ಮೀ. ಸೈಕಲ್ ಹೊಡೆದ ಭೂಪ!
ಪೂರ್ವನಿಗದಿಯಾಗಿದ್ದ ಮದುವೆಗಾಗಿ ನೂರು ಕಿಲೋ ಮೀಟರ್ ಸೈಕಲ್ ಸವಾರಿ; ವಧುವಿನೊಂದಿಗೆ ಮತ್ತೆ ಮನೆಗೆ ವಾಪಾಸು!
Team Udayavani, May 4, 2020, 2:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಕ್ನೋ: ಲಾಕ್ ಡೌನ್ ಇದ್ದರೂ ತನ್ನ ಮದುವೆಗಾಗಿ ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಪೌತಿಯಾ ಗ್ರಾಮದ ಯುವಕ ಮಹೋಬಾ ಜಿಲ್ಲೆಗೆ 100 ಕಿಮೀ ಸೈಕಲ್ನಲ್ಲಿ ಪ್ರಯಾಣಿಸಿ ಇಲ್ಲೊಬ್ಬ ಭೂಪ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಇಷ್ಟು ಮಾತ್ರವಲ್ಲದೇ ಮದುವೆ ಮುಕ್ತಾಯದ ನಂತರ ತನ್ನ ಹೊಸ ಹೆಂಡತಿಯನ್ನು ಅದೇ ಸೈಕಲ್ ನಲ್ಲಿ ಕೂರಿಸಿಕೊಂಡು ಝಮ್ಮಂತ ತನ್ನ ಊರಿಗೆ ವಾಪಾಸಾಗಿದ್ದಾನೆ ಈ ಆಸಾಮಿ. ಅಂದ ಹಾಗೆ ಇಂಥ ಸಾಧನೆ ಮಾಡಿದಾತನ ಹೆಸರು ಕಲ್ಕು ಪ್ರಜಾಪತಿ (32).
ನಾಲ್ಕು ತಿಂಗಳ ಹಿಂದೆಯೇ ನಮ್ಮಿಬ್ಬರ ಮದುವೆ ನಿಗದಿಯಾಗಿ, ಎಲ್ಲರಿಗೂ ಆಮಂತ್ರಣ ಪತ್ರಿಕೆ ಹಂಚಲಾಗಿತ್ತು. ಈ ನಡುವೆ ಕೋವಿಡ್ ಲಾಕ್ ಡೌನ್ ಜಾರಿಯಾಗಿದ್ದರಿಂದ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವುದು ಅಸಾಧ್ಯವಾಗಿತ್ತು.
ಆದರೂ ಪೂರ್ವನಿಗದಿಯಾಗಿದ್ದ ಮದುವೆಗೆ ಸಂಬಂಧಿತ ಅಧಿಕಾರಿಗಳ ಬಳಿ ಕಲ್ಕು ಪ್ರಜಾಪತಿ ಅನುಮತಿ ಕೇಳಿದ್ದರೂ ಅವರ್ಯಾರೂ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದಕಾರಣ ಈ ರೀತಿಯ ಸಾಹಸಕ್ಕೆ ತಾನು ಮನ ಮಾಡಿದ್ದಾಗಿ ಈತ ಹೇಳಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ
Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ