ಸುಗ್ರೀವಾಜ್ಞೆಯ ಮರುದಿನವೇ ‘ಲವ್ ಜಿಹಾದ್ ತಡೆ ಕಾಯ್ದೆಯಡಿ’ ಮೊದಲ ಪ್ರಕರಣ ದಾಖಲು
Team Udayavani, Nov 29, 2020, 6:15 PM IST
ಉತ್ತರ ಪ್ರದೇಶ: ಬಲವಂತದ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ(ಲವ್ ಜಿಹಾದ್) ವಿರುದ್ಧದ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರು ಶನಿವಾರ (ನವೆಂಬರ್ 28, 2020) ಅಂಕಿತ ಹಾಕಿದ ಬೆನ್ನಲ್ಲೇ ಇದೀಗ ಮೊದಲ ಪ್ರಕರಣ ದಾಖಲಾಗಿದೆ.
ಬರೇಲಿ ಜಿಲ್ಲೆಯ ದೇವರ್ ನಿಯಾನ್ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರು ತಮ್ಮ ಮಗಳನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ದೇವರ್ ನಿಯಾನ್ ಗ್ರಾಮದ ಟಿಕಾರಾಮ್ ಎಂಬ ವ್ಯಕ್ತಿ, ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಉವೈಶ್ ಅಹಮ್ಮದ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ತನ್ನ ಮಗಳನ್ನು ಆಕರ್ಷಿಸಿ ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಗಿದೆ;ದೇಶದ್ರೋಹಿಗಳನ್ನು ಮಟ್ಟ ಹಾಕುವುದು ಖಂಡಿತಾ: CT ರವಿ
ಮಾತ್ರವಲ್ಲದೆ ತನ್ನ ಮಗಳು ಮತ್ತು ಉವೈಶ್ ಅಹಮದ್ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಈ ವೇಳೆ ಉವೈಶ್ ತನ್ನ ಮಗಳಿಗೆ ಧಾರ್ಮಿಕ ಮತಾಂತರವಾಗಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇಲ್ಲವಾದಲ್ಲಿ ಕಿಡ್ನಾಪ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ತಿಳಿಸಿದ್ದಾರೆ.
ಇದೀಗ ಉವೈಶ್ ಅಹಮ್ಮದ್ ವಿರುದ್ದ ಐಪಿಸಿ ಸೆಕ್ಷನ್ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಲು ಮತ್ತು ಆರೋಪಿಯನ್ನು ಬಂಧಿಸಲು ಪೊಲೀಸರ ನಾಲ್ಕು ತಂಡ ಕಾರ್ಯಾಚರಣೆಗಿಳಿದಿದೆ.
ಇದನ್ನೂ ಓದಿ: ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳಿದವರ ಕಾರಿಗೆ ಬೆಂಕಿ: ಓರ್ವ ಸಜೀವ ದಹನ !
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಮ್ಸ್ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕನಿಗೆ ದೇಶದ ಮೊಟ್ಟ ಮೊದಲ ಲಸಿಕೆ!
OTT, ನ್ಯೂಸ್ ವೆಬ್ಸೈಟ್ಗೆ ಮೂಗುದಾರ :ಸ್ವಯಂ ನಿಯಂತ್ರಣ ಕಾಯ್ದೆ ರಚನೆಗೆ ಮುಂದಾದ ಕೇಂದ್ರ
ಬಂಧಿತ ಬಾರ್ಕ್ ಮಾಜಿ ಸಿಇಒ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಕೋವ್ಯಾಕ್ಸಿನ್ ನಿಂದ ಅಡ್ಡಪರಿಣಾಮ ಸಂಭವಿಸಿದರೆ ಪರಿಹಾರ ಕೊಡುತ್ತೇವೆ; ಭಾರತ್ ಬಯೋಟೆಕ್
2ನೇ ಡೋಸ್ ಪಡೆಯಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ಲಕ್ಷ್ಯ ಬೇಡ: ಪ್ರಧಾನಿ