ಎಮ್‌ಜೆಎಸಿ ಕಾಯ್ದೆ ರದ್ದು; ಸುಪ್ರೀಂ ಬಗ್ಗೆ ಉಪರಾಷ್ಟ್ರಪತಿ ಅಸಮಾಧಾನ
Team Udayavani, Dec 3, 2022, 8:54 PM IST
ನವದೆಹಲಿ: ಕೊಲಿಜಿಯಂ ಅನ್ನು ರದ್ದು ಮಾಡಿ, ಅದರ ಬದಲಿಗೆ ತರಲಾಗಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ಸಂಸತ್‌ನಲ್ಲಿ ಯಾವುದೇ ಗುಸುಗುಸು, ಪಿಸುಮಾತು ಇರಲಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದರು.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರ ಸಮ್ಮುಖದಲ್ಲೇ ಸುಪ್ರೀಂ ಕೋರ್ಟ್ ವಿರುದ್ಧ ಅಸಮಾಧಾನ ಹೊರಹಾಕಿದ ಧನ್‌ಕರ್, “ಸಂಸತ್ ಅಂಗೀಕರಿಸುವ ಕಾನೂನು, ಜನರ ಆಶಯಗಳನ್ನು ಪ್ರತಿಫಲಿಸುತ್ತದೆ. ಆದರೆ ಅದನ್ನು ಸುಪ್ರೀಂ ಕೋರ್ಟ್ ರದ್ದು ಮಾಡುತ್ತದೆ. ಇಂಥದ್ದೊಂದು ಘಟನೆ ಪ್ರಪಂಚದಲ್ಲಿ ಎಲ್ಲೂ ಈವರೆಗೆ ನಡೆದಿಲ್ಲ,’ ಎಂದರು.
“ಕಾನೂನಿಗೆ ಸಂಬಂಧಿಸಿದಂತೆ ವಸ್ತುನಿಷ್ಠ ಪ್ರಶ್ನೆಗಳು ಉದ್ಭವಿಸಿದಾಗ, ನ್ಯಾಯಾಲಯಗಳು ಅವುಗಳನ್ನು ಪರಿಹರಿಸಬಹುದು. ಆದರೆ ನಿಬಂಧನೆಗಳನ್ನು ರದ್ದುಗೊಳಿಸಬಹುದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ,’ ಎಂದು ಹೇಳಿದರು. “ಸಂವಿಧಾನದ ಪ್ರಸ್ತಾವನೆಯು ಭಾರತದ ಜನರಾದ ನಾವು ಎಂದು ಸಂಬೋಧಿಸುತ್ತದೆ. ಜನರ ಇಚ್ಛೆಗಳನ್ನು ಸಂಸತ್ತು ಪ್ರತಿಫಲಿಸುತ್ತದೆ,’ ಎಂದರು.
ಎಮ್‌ಜೆಎಸಿ ಕಾಯ್ದೆಯನ್ನು ಉಲ್ಲೇಖಿಸಿದ ಅವರು, “2015-16ರಲ್ಲಿ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸುವಾಗ ಇಡೀ ಸಂಸತ್ತು ಅವಿರೋಧವಾಗಿ ಅದಕ್ಕೆ ಮತ ಹಾಕಿತ್ತು. ರಾಜ್ಯಸಭೆಯಲ್ಲೂ ಅವಿರೋಧವಾಗಿ ಅಂಗೀಕಾರವಾಗಿತ್ತು. ಒಬ್ಬರು ಮಾತ್ರ ಗೈರಾಗಿದ್ದರು,’ ಎಂದು ಸ್ಮರಿಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಸ್ಥಾನ ಕೊಡುವಿರಾ? : ಫ್ಲೆಕ್ಸ್ ಹಿಡಿದು ರೌಡಿ ಶೀಟರ್ ಏಕಾಂಗಿ ಪ್ರತಿಭಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ
ಬಾಹ್ಯಾಕಾಶ ಪ್ರವಾಸೋದ್ಯಮ ಕೈಗೆತ್ತಿಕೊಳ್ಳಲು ಇಸ್ರೋ ಅಧ್ಯಯನ: ಕೇಂದ್ರ ಸರ್ಕಾರ
ವಂದನಾ ನಿರ್ಣಯ; ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ ಪ್ರಧಾನಿ ಮೋದಿ
ಭಾರತದ ಪ್ರದೇಶದೊಳಗೆ ನುಸುಳಿಬಂದ ಪಾಕ್ ಡ್ರೋನನ್ನು ಹೊಡೆದುರುಳಿಸಿದ ಬಿಎಸ್ಎಫ್
ಸ್ಮೃತಿ ಇರಾನಿ ಮಗಳು ಶಾನೆಲ್ಲೆ ಇರಾನಿಯ ವಿವಾಹ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
MUST WATCH
ಹೊಸ ಸೇರ್ಪಡೆ
ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ
ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಪೊಲೀಸರಿಂದ ತನಿಖೆ
ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ