ಮಳೆ ನೀರಲ್ಲಿ ತೇಲಿ ಬಂದ 6 ಅಡಿ ಉದ್ದದ ಮೊಸಳೆ, ನಾಯಿ ಮೇಲೆ ದಾಳಿಗೆ ಯತ್ನ: ವಿಡಿಯೋ ವೈರಲ್

Team Udayavani, Aug 1, 2019, 4:02 PM IST

ಅಹಮದಾಬಾದ್: ಗುಜರಾತ್ ನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಜನನಿಬಿಡ ಪ್ರದೇಶಕ್ಕೆ ತೇಲಿ ಬಂದ ಆರು ಅಡಿ ಉದ್ದದ ಮೊಸಳೆಯೊಂದು ಸದ್ದಿಲ್ಲದೆ ಹಿಂಬಾಲಿಸಿ  ಬೀದಿ ನಾಯಿ ಮೇಲೆ ದಾಳಿ ನಡೆಸಲು ಯತ್ನಿಸಿರುವ ವೀಡಿಯೋ ಫೂಟೇಜ್ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ವಡೋದರಾದ ಲಾಲ್ ಬಾಗ್ ಸಮೀಪದ ರಾಜಸ್ತಂಭ ಸೊಸೈಟಿ ಪ್ರದೇಶದಲ್ಲಿ ಮಳೆಯ ನೀರಿನಲ್ಲಿ ಮೊಸಳೆಯೊಂದು ತೇಲಿ ಬಂದಿತ್ತು. ಈ ಸಂದರ್ಭದಲ್ಲಿ ಎರಡು ಬೀದಿ ನಾಯಿಗಳ ಮೇಲೆ ಮೊಸಳೆ ದಾಳಿ ನಡೆಸಲು ಮಾಡಿ ವಿಫಲವಾದ ವೀಡಿಯೋ ಭಾರೀ ವೈರಲ್ ಆಗಿರುವುದಾಗಿ ತಿಳಿಸಿದೆ.

ಮಳೆಯ ಕೆಸರು ನೀರಿನಲ್ಲಿ ಅರ್ಧಂಬರ್ಧ ಅಡಗಿದ್ದ ಮೊಸಳೆ ನಿಧಾನಕ್ಕೆ ಬೀದಿ ನಾಯಿ ಸಮೀಪ ಬಂದಾಗ ನಾಯಿ ತಪ್ಪಿಸಿಕೊಂಡು ಓಡಿದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ