ಸಚಿವ ಅಮಿತ್ ಶಾಗೆ ವಾಜಪೇಯಿ ನಿವಾಸ
Team Udayavani, Jun 7, 2019, 6:15 AM IST
ನವದೆಹಲಿ: ನರೇಂದ್ರ ಮೋದಿ ಸಂಪುಟ ಸೇರಿರುವ ಅಮಿತ್ ಶಾಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಾಸಿಸುತ್ತಿದ್ದ ನಿವಾಸವನ್ನು ನೀಡುವ ಸಾಧ್ಯತೆಯಿದೆ. ಕೇಂದ್ರ ದೆಹಲಿಯಲ್ಲಿನ ಕೃಷ್ಣಾ ಮೆನನ್ ಮಾರ್ಗ್ನಲ್ಲಿರುವ ನಿವಾಸಕ್ಕೆ 2004ರಲ್ಲಿ ವಾಜಪೇಯಿ ತೆರಳಿದ್ದರು. ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆಯೇ ಅವರಿಗೆ ಈ ಸರ್ಕಾರಿ ನಿವಾಸ ನೀಡಲಾಗಿತ್ತು. ಕಳೆದ ವರ್ಷದ ವಾಜಪೇಯಿ ನಿಧನರಾದ ನಂತರ ನವೆಂಬರ್ನಲ್ಲಿ ಅವರ ಕುಟುಂಬ ಈ ಮನೆ ಖಾಲಿ ಮಾಡಿತ್ತು.
ಮೂಲಗಳ ಪ್ರಕಾರ ಶಾ ಇತ್ತೀಚೆಗೆ ಈ ಮನೆಗೆ ಭೇಟಿ ನೀಡಿ, ಕೆಲವು ಬದಲಾವಣೆ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಅನುಗುಣವಾಗಿ ನವೀಕರಣ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆರಡು ತಿಂಗಳಲ್ಲಿ ನವೀಕರಣ ಪ್ರಕ್ರಿಯೆ ಮುಗಿಯಲಿದೆ ಎನ್ನಲಾಗಿದೆ. ಸದ್ಯ ಅಕ್ಬರ್ ರೋಡ್ ನಿವಾಸದಲ್ಲಿ ಶಾ ವಾಸಿಸುತ್ತಿದ್ದಾರೆ.
ಯಾವುದೇ ಸರ್ಕಾರಿ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡುವುದಿಲ್ಲ ಎಂದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರ್ಧಾರ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಾಜಪೇಯಿ ನಿವಾಸವನ್ನು ಸ್ಮಾರಕವನ್ನಾಗಿಸದೇ, ಮರುಬಳಕೆ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ