ವೀರಪ್ಪನ್ ಸಹೋದರ ಮಡೈವನ್ ಹೃದಯಾಘಾತದಿಂದ ಸಾವು
Team Udayavani, May 25, 2022, 7:07 PM IST
ಚೆನ್ನೈ: ದಂತಕಳ್ಳ ಮತ್ತು ಪೊಲೀಸರ ಗುಂಡಿಗೆ ಬಲಿಯಾದ ವೀರಪ್ಪನ್‌ನ ಹಿರಿಯ ಸಹೋದರ ಮಡೈವನ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಈತ ಅರಣ್ಯ ಅಧಿಕಾರಿ ಚಿದಂಬರಂ ಅವರನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
1987ರಿಂದಲೂ ಈತ ಸೇಲಂನ ಕೇಂದ್ರ ಕಾರಾಗೃಹದಲ್ಲೇ ಜೈಲುವಾಸ ಅನುಭವಿಸುತ್ತಿದ್ದ. ಮೇ 1ರಂದು ಈತನಿಗೆ ಹೃದಯಾಘಾತವಾಗಿದ್ದು, ಸೇಲಂ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಸತ್ತಿದ್ದಾನೆ. 2004ರ ಅ.18ರಂದು ವೀರಪ್ಪನ್‌ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇಂದಿಗೂ ಇವನ ಸಹಚರರು, ಸಂಬಂಧಿಗಳು ತಮಿಳುನಾಡಿನ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ
ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ ಯುವಕರು!
ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ
ಹೊಸ ಕಾರುಗಳಿಗೆ ಇನ್ನು ದೇಶದಲ್ಲೇ ಕ್ರ್ಯಾಶ್ ಟೆಸ್ಟ್: ಏನಿದು ಕಾರ್ ಕ್ರ್ಯಾಶ್ ಟೆಸ್ಟ್?
ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್!